ಪ್ರಧಾನ ಸುದ್ದಿ

ಅಬ್‌ಕೀ ಬಾರ್ ಮೋದಿ ಸರ್ಕಾರ್

Published On :

ನವದೆಹಲಿ: ಅಬ್‌ಕೀ ಬಾರ್ ಮೋದಿ ಸರ್ಕಾರ್...! - ಇದು ಬಿಜೆಪಿಯ ಚುನಾವಣಾ ಉದ್ಘೋಷ.
ಆದರೆ, ಇದು ಹೊಸ ಉದ್ಘೋಷವೇನಲ್ಲ. ಹನ್ನೆರಡು ವರ್ಷಗಳ ಹಿಂದಿನ ಉದ್ಘೋಷದ ಬದಲಾದ ರೂಪ ಇದು. 1998ರಲ್ಲಿ 'ಅಬ್ ಕೀ ಬಾರಿ ಅಟಲ್ ಬಿಹಾರಿ' ಎನ್ನುವ ಘೋಷಣೆಯೊಂದಿಗೆ ಮತ ಸಮರಕ್ಕಿಳಿದಿದ್ದ ಬಿಜೆಪಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯೂ ಆಗಿತ್ತು. ಆಗಿದ್ದ ಬಿಜೆಪಿ ಹವಾ ಈಗಲೂ ಇದೆ. ಆಗ ಅಟಲ್ ಇದ್ದರೆ ಈಗ ಆ ಜಾಗದಲ್ಲಿ  ಮೋದಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎನ್ನುವುದಷ್ಟೆ ವ್ಯತ್ಯಾಸ. ಹಾಗಾಗಿ ಆ ರೀತಿಯ ಯಶಸ್ಸು ಈ ಬಾರಿಯೂ ಪಕ್ಷಕ್ಕೆ ದಕ್ಕಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಇದೇ ಕಾರಣಕ್ಕೆ ಬಿಜೆಪಿ ಸತತ ಎರಡು ಬಾರಿ ಯುಪಿಎ ಸರ್ಕಾರಕ್ಕೆ ಅಧಿಕಾರ ನೀಡಿದ್ದೀರಿ. ಈ ಬಾರಿ ಮೋದಿಗೆ ಅಧಿಕಾರ ನೀಡಿ ನೋಡಿ ಎನ್ನುತ್ತಾ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ.
'ಅಬ್ ಕೀ ಬಾರ್ ಮೋದಿ ಸರ್ಕಾರ್‌' ಜಾಹೀರಾತನ್ನು ಹೊಂದಿರುವ ಫ್ಲೆಕ್ಸ್‌ಗಳನ್ನು ದೇಶಾದ್ಯಂತ ಅಳವಡಿಸುತ್ತಿದೆ. ಅಂದ ಹಾಗೆ 'ಅಬ್‌ಕೀ ಬಾರ್...' ಉದ್ಘೋಷದ ಹಿಂದಿರುವುದು ಪ್ರತಿಭಾವಂತ ಜಾಹೀರಾತು ತಲೆಗಳಾದ ಪಿಯೂಶ್ ಪಾಂಡೆ, ಪ್ರಸೂನ್ ಜೋಶಿ ಮತ್ತು ಸ್ಯಾಮ್ ಬಲ್ಸಾರಾ. ಈ ಮೂವರು ಬಿಜೆಪಿಯ 400 ಕೋಟಿ ಜಾಹೀರಾತು ಆಂದೋಲನದ ಬೆನ್ನೆಲುಬು ಕೂಡ ಆಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.