ಪ್ರಧಾನ ಸುದ್ದಿ

ಕರ್ನಾಟಕದಲ್ಲಿ ಬಿಜೆಪಿಗೆ ಬಲ

ಕರ್ನಾಟಕದಲ್ಲಿ ಬಿಜೆಪಿಗೆ ಬಲ
Published On :

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಕಮಾಲ್... ಇದು ಎನ್‌ಡಿಟಿವಿ ಮತ್ತು ಹನ್ಸ ಸಂಶೋಧನಾ ಗ್ರೂಪ್‌ನ ಸಹಭಾಗಿತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶ.   28 ಕ್ಷೇತ್ರಗಳಲ್ಲಿ 20 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿರುವ ಈ ಸಮೀಕ್ಷೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕಾರಣವಾಗಲಿದ್ದಾರೆ ಎಂದು ಹೇಳಿದೆ. ಹೀಗಾಗಿ ಕಳೆದ ಬಾರಿಯ ಚುನಾವಣೆಯ ಸ್ಥಾನಗಳಿಗಿಂತ ಒಂದು ಸ್ಥಾನ ಹೆಚ್ಚನ್ನೇ ಅದು ಗಳಿಸಿಕೊಳ್ಳಲಿದೆ ಎಂದಿದೆ.
ಇನ್ನು ಕಾಂಗ್ರೆಸ್ ಕಳೆದ ಬಾರಿಯ ಅಂಕಿಯನ್ನೇ ಉಳಿಸಿಕೊಳ್ಳಲಿದೆ. ಅಂದರೆ 6 ಸ್ಥಾನಗಳು ದಕ್ಕಲಿವೆ ಎಂದು ಹೇಳಿದೆ. ಜೆಡಿಎಸ್ ಒಂದು ಸ್ಥಾನ ಕಳೆದುಕೊಳ್ಳಲಿದ್ದು, ಇದು ಬಿಜೆಪಿ ಪಾಲಿಗೆ ದಕ್ಕಲಿದೆ ಎಂದು ತಿಳಿಸಿದೆ. ಒಟ್ಟು 12 ರಾಜ್ಯಗಳ ಸಮೀಕ್ಷೆ ನಡೆಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 166 ಸ್ಥಾನಗಳನ್ನು ಗಳಿಸಿಕೊಳ್ಳಲಿದೆ ಎಂದಿದೆ. ಯುಪಿಎ 52ರಲ್ಲಿ ಗೆದ್ದರೆ, ಇತರೆ ಪಕ್ಷಗಳು 85 ಸ್ಥಾನ ಗೆಲ್ಲಲಿವೆ ಎಂದಿದೆ.
ಬಿಜೆಪಿ 20
ಕಾಂಗ್ರೆಸ್ 6
ಜೆಡಿಎಸ್ 2
ಒಟ್ಟು ಸ್ಥಾನ -28
ಇತರೆ ರಾಜ್ಯಗಳ ಸಮೀಕ್ಷೆಯ ವಿವರ
ರಾಜ್ಯ                   ಸ್ಥಾನ     ಎನ್‌ಡಿಎ    ಯುಪಿಎ    ಪರ್ಯಾಯ     ಇತರೆ
ತಮಿಳುನಾಡು          39         0                 0             -                39
ಪಶ್ಚಿಮ ಬಂಗಾಳ      42          0                 1            9                32
ರಾಜಸ್ಥಾನ              25        19                 5           -                  1
ದೆಹಲಿ                    7           2                  1           -                  4
ಹರ್ಯಾಣ              10         7                   3           -                  -
ಮಹಾರಾಷ್ಟ್ರ           48        33                 12          -                  3
ಮಧ್ಯ ಪ್ರದೇಶ         29        24                  4           -                  1
ಛತ್ತೀಸ್‌ಗಡ            11         9                   2           -                -
ಗುಜರಾತ್              26        23                  3           -                -
ಜಾರ್ಖಂಡ್             14        6                   4            -                 4
ಬಿಹಾರ                  40        23                 11          5                 1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.