ಪ್ರಧಾನ ಸುದ್ದಿ

ನನ್ನ ಆರೋಗ್ಯಚೆನ್ನಾಗಿದೆ...

ನನ್ನ ಆರೋಗ್ಯಚೆನ್ನಾಗಿದೆ...
Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಮಾ.18
ಹೆಚ್ಚು ಕಮ್ಮಿ ಒಂದು ತಿಂಗಳಿನ ನಂತರ ನಟ ಹಾಗೂ ಸಚಿವ ರೆಬೆಲ್ ಸ್ಟಾರ್ ಅಂಬರೀಷ್ ಮಾತನಾಡಿದ್ದಾರೆ. ಆ ಮೂಲಕ ತಾವು ಆರೋಗ್ಯವಾಗಿರುವುದಾಗಿ ಖಚಿತ ಪಡಿಸಿದ್ದಾರೆ.
ತಾವು ಆರೋಗ್ಯವಾಗಿರುವುದಾಗಿ ಹೇಳಿರುವ ಎರಡ್ಮೂರು ನಿಮಿಷಗಳ ವಿಡಿಯೋ ಕ್ಲಿಪ್ಪಿಂಗ್ ಅನ್ನು ಸಿಂಗಾಪುರದ ಮೌಂಟ್ ಎಲ್ಜಿಬೆತ್ ಆಸ್ಪತ್ರೆಯಿಂದಲೇ ಬೆಂಗಳೂರಿನ ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಅಂಬರೀಶ್ ಆಸ್ಪತ್ರೆ ಸೇರಿದ ಮೇಲೆ ಆರೋಗ್ಯವಾಗಿ ಇದೇ ಮೊದಲ ಬಾರಿಗೆ ಮಾತನಾಡಿದ್ದನ್ನು ನೋಡಿರುವ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸಿಂಗಾಪುರದಿಂದಲೇ ಅಂಬರೀಶ್ ಅವರು ಹೇಳಿದ್ದಿಷ್ಟು...
ನನ್ನ ಅಭಿಮಾನಿಗಳಿಗೆ ನಮಸ್ಕಾರಗಳು. ವಿಕ್ರಂ ಆಸ್ಪತ್ರೆಯಲ್ಲಿ ಕೆಲ ಕಾಲ ಚಿಕಿತ್ಸೆ ಪಡೆದುಕೊಂಡ ನಂತರ ವೈದ್ಯರ ಸಲಹೆ ಮೇರೆಗೆ ಸಿಂಗಾಪುರಕ್ಕೆ ಬಂದು ಚಿಕಿತ್ಸೆ ತೆಗೆದುಕೊಂಡೆ. ಈಗ ಆರೋಗ್ಯವಾಗಿದ್ದೇನೆ. ಅಭಿಮಾನಿಗಳ ಪ್ರಾರ್ಥನೆಯಿಂದ ನಾನು ಚೇತರಿಸಿಕೊಂಡಿದ್ದೇನೆ. ದಿನದ 24 ಗಂಟೆಯೂ ನನಗೆ ಚಿಕಿತ್ಸೆ ನೀಡಿ ಉಪಚರಿಸಿದ ವಿಕ್ರಂ ಆಸತ್ರೆಯ ವೈದ್ಯರಿಗೆ ನಾನು ಅಭಾರಿಯಾಗಿದ್ದೇನೆ.
ಹಾಗೆ ನನ್ನ ಯೋಗಕ್ಷೇವುಕ್ಕಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡ ತಕ್ಷಣ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬೇಕಾದ ಸೌಲಭ್ಯಗಳನ್ನು ಒದಗಿಸಿದೆ. ಜೊತೆಗೆ ನನ್ನ ನೋಡಲು ಬಂದ ಗಣ್ಯರಿಗೆ ನನ್ನ ಕೃತಜ್ಞತೆಗಳು.
ಆದರೆ, ಸದ್ಯಕ್ಕೆ ನಾನು ಬೆಂಗಳೂರಿಗೆ ಬರಲು ಆಗುತ್ತಿಲ್ಲ. ವೈದ್ಯರು ಸೂಚಿಸಿರುವಂತೆ ಇಲ್ಲೇ ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ. ಖಂಡಿತ ನಿಮ್ಮ ಅಂಬರೀಶ್ ಮತ್ತೆ ಅದೇ ರೆಬೆಲ್ ಸ್ಟಾರ್ ಆಗಿ ಬೆಂಗಳೂರಿಗೆ ಮರಳಿ ಬರಲಿದ್ದಾರೆ. ಜೈ ಹಿಂದ್... ಜೈ ಕರ್ನಾಟಕ ಮಾತೆ.
ಹೀಗೆ ಹೇಳಿರುವ ಅಂಬರೀಶ್ ಮುಖದಲ್ಲಿ ಎಂದಿಗಿಂತ ಹೆಚ್ಚು ಲವಲವಿಕೆ ಕಂಡು ಬಂದಿದೆ.  ಕೊಂಚ ಸಣ್ಣಗೆ ಆಂದಂತೆ ಕಂಡರೂ ಅಂಬರೀಶ್ ಹೆಚ್ಚು ಸ್ಮಾರ್ಟ್ ಆಗಿದ್ದಾರೆ ಎಂಬುದು ವೀಡಿಯೋ ಕ್ಲಿಪಿಂಗ್ ನೋಡಿರುವ ಅವರ ಅಭಿಮಾನಿಗಳ ಮಾತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.