ಕೊನೆಗೂ ಆಡ್ವಾಣಿಗೆ ಗಾಂಧಿನಗರವೇ ಸನ್ನಿಧಾನ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ , ಮಾ. 20
ಗುಜರಾತ್ನ ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಬಿಜೆಪಿ ವರಿಷ್ಠ ನಾಯಕ ಎಲ್.ಕೆ.ಆಡ್ವಾಣಿ ಒಪ್ಪಿಕೊಂಡಿದ್ದಾರೆ. 16 ವರ್ಷಗಳಿಂದ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಣದಿಂದ ಸ್ಪರ್ಧಿಸುವುದಕ್ಕೆ ಸಿದ್ಧನಿದ್ದೇನೆ ಎಂದಿದ್ದಾರೆ.
ಹೀಗಾಗಿ, ಬಿಜೆಪಿ ನಾಯಕರು ಆಡ್ವಾಣಿಯವರು ಭೋಪಾಲ್ನಿಂದ ಸ್ಪರ್ಧಿಸುವುದನ್ನು ತಪ್ಪಿಸಿ, ಹಾಲಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮೊದಲು ಗುರುವಾರ ದಿನವಿಡೀ ಆಡ್ವಾಣಿ ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದರು. ಭೋಪಾಲ್ ಅಥವಾ ಗಾಂಧಿನಗರ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಬಿಟ್ಟುಕೊಡಲಾಗಿದೆ. ಗಾಂಧಿನಗರದಿಂದಲೇ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಮನವೊಲಿಸಲು
ಆರ್ಎಸ್ಎಸ್ ನಾಯಕರು ಪ್ರಯತ್ನ ನಡೆಸಿದ್ದರು. ತಾತ್ಕಾಲಿಕ ಶಮನವಾಗಿ ಕ್ಷೇತ್ರ ಆಯ್ಕೆ ಅಧಿಕಾರವನ್ನು ಲಾಲ್ಕೃಷ್ಣ ಆಡ್ವಾಣಿ ಅವರಿಗೆ ನೀಡಲಾಗಿತ್ತು. ಗುರುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಆರ್ಎಸ್ಎಸ್ನ ಭಯ್ಯಾಜಿ ಜೋಷಿ ದೂರವಾಣಿ ಕರೆ ಮಾಡಿ ಸಮಾಲೋಚಿಸಿದರು. ನಂತರ ರಾಜನಾಥ್ ಸಿಂಗ್ ಅವರು ಕ್ಷೇತ್ರ ಆಯ್ಕೆ ಆಡ್ವಾಣಿ ಅವರಿಗೆ ಬಿಟ್ಟದ್ದು ಎಂದು ಪ್ರಕಟಿಸಿದ್ದರು.
ನವದೆಹಲಿ: ಚುನಾವಣೆಗಾಗಿ ಕಾಂಗ್ರೆಸ್ ವರಿಷ್ಠ ಮಂಡಳಿ 50 ಅಭ್ಯರ್ಥಿಗಳ ಹೆಸರಿರುವ ನಾಲ್ಕನೇ ಪಟ್ಟಿಯನ್ನು ಗುರುವಾರ ರಾತ್ರಿ ಪ್ರಕಟಿಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ತಾಕೀತಿ'ನ ಹೊರತಾಗಿಯೂ ಕೇಂದ್ರ ಹಣಕಾಸು ಸಚಿವ ಪಳನಿಯಪ್ಪನ್ ಚಿದಂಬರಂ ತಮಿಳುನಾಡಿನ ಶಿವಗಂಗಾದಿಂದ ಸ್ಪರ್ಧಿಸಲು ನಿರಾಕರಿಸಿದ್ದಾರೆ.
ಹೀಗಾಗಿ ಪುತ್ರ ಕಾರ್ತಿ ಚಿದಂಬರಂ ಸ್ಪರ್ಧಿಸಲಿದ್ದಾರೆ. ಇದೇ ರಾಜ್ಯದ ಮೈಲಾರತುಡರೈನಿಂದ ಕೇಂದ್ರದ ಮಾಜಿ ಸಚಿವ ಮಣಿಶಂಕರ ಅಯ್ಯರ್ ಈ ಬಾರಿಯ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸುವ ಅವಕಾಶ ಪಡೆದಿದ್ದಾರೆ.
ಹಾಲಿ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಸ್ಪರ್ಧಿಸುತ್ತಿರುವ ಮಧ್ಯಪ್ರದೇಶದ ವಿದಿಶಾದಿಂದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸಹೋದರ ಲಕ್ಷ್ಮಣ್ ಸಿಂಗ್ಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಬಿರುಸಿನ ಸ್ಪರ್ಧೆಉಂಟಾಗುವ ಸಾಧ್ಯತೆ ಖಚಿತವಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂನಬಿ ಆಜಾದ್ ಜಮ್ಮು-ಕಾಶ್ಮೀರದ ಉಧಾಂಪುರದಿಂದ ಕಣಕ್ಕೆ ಇಳಿಯಲಿದ್ದಾರೆ.
ವಾರಾಣಸಿ ಬಗ್ಗೆ ಮೌನ: ಈ ಪಟ್ಟಿಯಲ್ಲಿ ಕೂಡ ಬಿಜೆಪಿ ಪ್ರಧಾನಿ ಅಭ್ಯರ್ಥಿ ಸ್ಪರ್ಧಿಸುತ್ತಿರುವ ವಾರಾಣಸಿ ಕ್ಷೇತ್ರದಿಂದ ಯಾರನ್ನೂ ಕಣಕ್ಕೆ ಇಳಿಸುವ ಬಗ್ಗೆ ಪ್ರಸ್ತಾಪವನ್ನೇ ಮಾಡಲಾಗಿಲ್ಲ.
ಧಾರವಾಡ, ಹಾವೇರಿಗಿಲ್ಲ ಘೋಷಣೆ: ಧಾರವಾಡ ಲೋಕಸಭಾ ಕ್ಷೇತ್ರ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈಗಾಗಲೇ ರಾಜ್ಯದ 26 ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಈ ಕ್ಷೇತ್ರಗಳ ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ತಡೆ ಹಿಡಿದಿದೆ. ಈ ಎರಡೂ ಕ್ಷೇತ್ರಗಳ ಪೈಕಿ ಅಲ್ಪಸಂಖ್ಯಾತರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬ ಗೊಂದಲದ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ.
ಇದುವರೆಗೆ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದ್ದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಆರ್. ಪಾಟೀಲ್ಗೆ ಟಿಕೆಟ್ ನೀಡುವಂತೆ ಎಚ್.ಕೆ.ಪಾಟೀಲ್ ಒತ್ತಡ ಹೇರಿದ್ದರು.
ಕಳೆದ ಚುನಾವಣೆಯಲ್ಲಿ ಇಲ್ಲಿ ಸ್ಪರ್ಧಿಸಿ ಸೋತಿದ್ದ ಸಲೀಂ ಅಹ್ಮದ್ ಹಾಗೂ ಮಾಜಿ ಸಂಸದ ಐ.ಜಿ.ಸನದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ ಪಟ್ಟಿ ಫೈನಲ್
ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ 15 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಅಂತಿಮಪಡಿಸಿ, ಪ್ರಕಟಿಸಿದೆ. ಚಿಕ್ಕಬಳ್ಳಾಪುರದಿಂದ ಕುಮಾರಸ್ವಾಮಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೋದಿ ವಿರುದ್ಧ ಸಚಿನ್ ಸಂಚು
ಇಂಥದ್ದೊಂದು ಯೋಜನೆ ಕಾಂಗ್ರೆಸ್ ತಲೆಯಲ್ಲಿ ಸುಳಿ ದಾಡಿತ್ತು. ಈ ಬಗ್ಗೆ ಸಚಿನ್ ಅವರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ವಾರಾಣಸಿಯಿಂದ ಸ್ಪರ್ಧಿಸಲು ಸಚಿನ್ ತೆಂಡೂಲ್ಕರ್ ಒಲ್ಲೆ ಎಂದಿದ್ದಾರೆ. ಈ ಮಧ್ಯೆ ವಾರಾಣಸಿಯಿಂದ ಸ್ಪರ್ಧಿಸುವ ಬಗ್ಗೆ ನನಗೇ ಗೊತ್ತಿಲ್ಲ ಎಂದಿದ್ದಾರೆ ದಿಗ್ವಿಜಯ ಸಿಂಗ್.
ಗೊಂದಲ ಪರಿಹಾರ
ರಾಜ್ಯದ 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ನವದೆಹಲಿಗೆ ಕಳುಹಿಸಲಾಗಿದೆ. ಬೀದರ್ಗೆ ಗುರುಪಾದಪ್ಪ ನಾಗಮಾರಪಳ್ಳಿ, ಬಳ್ಳಾರಿಗೆ ಬಿ.ಶ್ರೀರಾಮುಲು, ಹಾಸನದಿಂದ ವಿಜಯಶಂಕರ್ ಅಧಿಕೃತ ಅಭ್ಯರ್ಥಿಗಳಾಗಲಿದ್ದಾರೆ.
ತಪ್ಪಾದ್ರೆ ಹುಷಾರ್
ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ರೆ ಹುಷಾರ್, ಮುಂದೆ ಕಷ್ಟ ಎದುರಿಸಬೇಕಾದೀತು. ನೀವು ಸಲ್ಲಿಸಿರುವ ಮಾಹಿತಿಯನ್ನು ಚುನಾವಣಾ ಆಯೋಗ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೆ.
ಅತಿವಿಶ್ವಾಸ ಮುಳುವು
ಅತಿಯಾದ ವಿಶ್ವಾಸವೇ ಬಿಜೆಪಿಗೆ ಮುಳುವಾಗಲಿದೆ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಹೇಳಿ ದ್ದಾರೆ. 2004ರ ಭಾರತ ಬೆಳಗುತ್ತಿದೆ ಎಂಬ ಘೋಷ ವಾಕ್ಯವೂ ಅವರ ಪಾಲಿಗೆ ಮುಳುವಾಗಿತ್ತು ಎಂದಿದ್ದಾರೆ.
ಜಸ್ವಂತ್ ಜಟಿಲ
ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್
ಸಿಂಗ್ ಕೂಡ ರಾಜಸ್ಥಾನದ ಬಾರ್ಮೆರ್ನಲ್ಲಿ ಸ್ಪರ್ಧಿಸುವ ಪಟ್ಟು ಹಿಡಿದಿದ್ದಾರೆ. ಆದರೆ ಈ ಕ್ಷೇತ್ರ
ದಲ್ಲಿ ಸೋನಾರಾಮ್ಗೆ ಟಿಕೆಟ್ ಕೊಡಲು ವಸುಂಧರಾ ರಾಜೆ ಬಯಸಿದ್ದಾರೆ. ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಎಚ್ಚರಿಕೆಯನ್ನೂ ಜಸ್ವಂತ್ ನೀಡಿದ್ದಾರೆ.
ಅಮರೀಂದರ್ ಇಲ್ಲ
ಅಮೃತಸರ ಕ್ಷೇತ್ರದಿಂದ ಬಿಜೆಪಿಯ ಅರುಣ್ ಜೇಟ್ಲಿ ವಿರುದ್ಧ ಪ್ರಬಲ ಅಭ್ಯರ್ಥಿ ಇಳಿಸುವ ಕಾಂಗ್ರೆಸ್ ಚಿಂತನೆಗೆ ಹಿನ್ನೆಡೆಯಾಗಿದೆ. ಮಾಜಿ ಸಿಎಂ ಅಮರೀಂದರ್ ಸಿಂಗ್ ಸ್ಪರ್ಧಿಸಲ್ಲ ಎಂದು ಹೈಕಮಾಂಡ್ಗೆ ಮಾಹಿತಿ ಮುಟ್ಟಿಸಿದ್ದಾರೆ.
ತಮಿಳುನಾಡಲ್ಲಿ ಮೈತ್ರಿ
ತಮಿಳುನಾಡಿನಲ್ಲಿ ಬಿಜೆಪಿ ಎಂಡಿಎಂಕೆ, ಪಿಎಂಕೆ, ಡಿಎಂಡಿಕೆ ಸೇರಿದಂತೆ
7 ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ವಿಜಯಕಾಂತ್ ಅವರ ಪಕ್ಷವೇ ಪ್ರಮುಖ ಮೈತ್ರಿ ಪಕ್ಷವಾಗಲಿದೆ.
ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುವ ನಾನು ಹಾಸನದಿಂದಲೇ ಸ್ಪರ್ಧಿಸುತ್ತೇನೆ.
ಬಿಜೆಪಿ ನನಗೆ ಎಲ್ಲಾ ರೀತಿಯ ಅವಕಾಶ ನೀಡಿದೆ. ಹೀಗಾಗಿ ಅದರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.
- ಸಿ.ಎಚ್.ವಿಜಯಶಂಕರ್, ಬಿಜೆಪಿ ನಾಯಕ
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಈ ಕುರಿತ ವರದಿಗಳೆಲ್ಲಾ ಆಧಾರ ರಹಿತ. ಏನೇ ಗೊಂದಲಗಳಿದ್ದರೂ ಮಾತುಕತೆಯ ಮೂಲಕ ನಾವು ಪರಿಹರಿಸಿಕೊಳ್ತೇವೆ.
- ನಿರ್ಮಲಾ ಸೀತಾರಾಮನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


