ಪ್ರಧಾನ ಸುದ್ದಿ

ರಜನಿ ಅಭಿನಯದ 'ಲಿಂಗ' ಚಿತ್ರಕ್ಕೆ ಅನುಮತಿ ನಕಾರ

ರಜನಿ ಅಭಿನಯದ 'ಲಿಂಗ' ಚಿತ್ರಕ್ಕೆ ಅನುಮತಿ ನಕಾರ
Published On :

ಕ.ಪ್ರ. ವಾರ್ತೆ ಮೈಸೂರು ಮೇ 1
ತಮಿಳುಚಿತ್ರ ರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಲಿಂಗ ಚಿತ್ರದ ಚಿತ್ರೀಕರಣಕ್ಕೆ ಮೈಸೂರು ಅರಮನೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.
ಮೈಸೂರು ಮತ್ತು ಮೇಲುಕೋಟೆ ಭಾಗದಲ್ಲಿ ರಜನೀಕಾಂತ್ ಅಭಿನಯದ ಚಲನಚಿತ್ರದ ಒಂದು ದೃಶ್ಯವಾದರೂ ಚಿತ್ರೀಕರಣ ಆಗುವುದು ಸಾಮಾನ್ಯ. ಅಂತೆಯೇ ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ 'ಲಿಂಗ' ಚಿತ್ರದ ಚಿತ್ರೀಕರಣದ ಮುಹೂರ್ತಕ್ಕೆ ಗುರುವಾರ ಮೈಸೂರಿನ ಅರಮನೆಗೆ ಆಗಮಿಸಿದ್ದರು. ಆದರೆ ಅರಮನೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಲಾಯಿತು.
ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಹದಿನೈದು ದಿನಗಳ ಹಿಂದೆ ಬೆಂಗಳೂರಿನಿಂದ ಯಾರೊ ಒಬ್ಬರು ದೂರವಾಣಿ ಕರೆ ಮಾಡಿ ಅನುಮತಿ ಕೋರಿದ್ದರು.  ಈ ಬಗ್ಗೆ ಆಡಳಿತ ಮಂಡಳಿ ತೀರ್ಮಾನಿಸಬೇಕು ಎಂದರು.
ಇದೇ ಚಿತ್ರದ ಚಿತ್ರೀಕರಣ ಮೇಲುಕೋಟೆಯ ರಾಯಗೋಪುರ, ಕಲ್ಯಾಣಿ, ಅಕ್ಕತಂಗಿಕೊಳ, ಏಕಶಿಲಾಗಣಪತಿ, ಯೋಗನರಸಿಂಹಸ್ವಾವು ಬೆಟ್ಟ ಹಾಗೂ ಸುತ್ತಮುತ್ತ ಇದೇ ವಾರ ನಡೆಯಲಿದೆ. ಚಿತ್ರೀಕರಣದಲ್ಲಿ ರಜನಿ ಮತ್ತು ಸೋನಾಕ್ಷಿ ಸಿನ್ಹ ಪಾಲ್ಗೊಳ್ಳುತ್ತಿದ್ದಾರೆ. ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆಸಲು ಬೆಂಗಳೂರಿನ ರಾಕ್ ಲೈನ್ ಎಂಟರ್ ಟ್ರೈನ್‌ಮೆಂಟ್ 50 ಸಾವಿರ ಡಿಡಿ ಪಾವತಿಸಿ ಮಂಡ್ಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.