ಗ್ರಾಮೀಣ ರಸ್ತೆ, ಸೇತುವೆಯ ಅಭಿವೃದ್ಧಿಗೆ 26.20 ಕೋಟಿ
ಮೈಸೂರು: ಗ್ರಾಮೀಣ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ 26.20 ಕೋಟಿ ಬಿಡುಗಡೆ ಮಾಡಿದೆ.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ಈ ಹಣ ಬಿಡುಗಡೆಯಾಗಿದೆ. ಈ ಪೈಕಿ 20.96 ಕೋಟಿ ರು. ಅನ್ನು ನಬಾರ್ಡ್ ಸಾಲದ ರೂಪದಲ್ಲಿ ನೀಡಿದೆ. ಈ ಹಣದಲ್ಲಿ 35 ರಸ್ತೆ ಹಾಗೂ ಒಂದು ಸೇತುವೆ ಅಭಿವೃದ್ಧಿ ಕಾಮಗಾರಿಗಳನ್ನು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ಕೈಗೆತ್ತಿಕೊಳ್ಳಲಾಗುವುದು. ಈ ಎಲ್ಲ ಕಾಮಗಾರಿಗಳನ್ನು 2015ರ ಮಾರ್ಚ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ನಿಬಂಧನೆಗಳು: ಭೂಸಾರಿಗೆ ಸಚಿವಾಲಯ, ಹೆದ್ದಾರಿ ಮತ್ತು ರೋಡ್ ಕಾಂಗ್ರೆಸ್‌ನ ತಾಂತ್ರಿಕ ಮಾರ್ಗಸೂಚಿಯನ್ವಯ ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆಸಬೇಕು. ರಸ್ತೆಗಳಿಗೆ ಕ್ರಾಸ್ ಚರಂಡಿಗಳಿರಬೇಕು. ಕನಿಷ್ಠ ಮೂರು ವರ್ಷಗಳವರೆಗೆ ದುರಸ್ತಿಗೆ ಬಾರದಂತೆ ಗುಣಮಟ್ಟದ ರಸ್ತೆ ಹಾಗೂ ಸೇತುವೆ ನಿರ್ಮಿಸಬೇಕು. ಗುತ್ತಿಗೆದಾರರು ಮೂರು ವರ್ಷಗಳು ನಿರ್ವಹಣೆ ಮಾಡಬೇಕು. ಮೂರು ಹಂತಗಳ ಕಾಮಗಾರಿ ಫೋಟೊ ತೆಗೆದು, ಇಲಾಖೆಯ ವೆಬ್‌ಸೈಟ್‌ಗೆ ಹಾಕಬೇಕು. ಜಿಪಂ ಸಿಇಒಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್‌ಗಳ ಕಾಮಗಾರಿಗಳ ಉಸ್ತುವಾರಿಯನ್ನು ವೀಕ್ಷಿಸಬೇಕು. ತಾಂತ್ರಿಕ ಸಿಬ್ಬಂದಿಯಿಂದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.
ಎಲ್ಲೆಲ್ಲಿ ಈ ಹಣ ಬಳಕೆ?
ಬಾಗಲಕೋಟೆ ಜಿಲ್ಲೆಯ ಬಾದಾಮಿ 96 ಲಕ್ಷ
ಬೆಂಗಳೂರು ನಗರ 50 ಲಕ್ಷ
ಬೆಳಗಾವಿ ಜಿಲ್ಲೆಯ ರಾಮದುರ್ಗ, ಗೋಕಾಕ, ಚಿಕ್ಕೋಡಿ 2.40 ಕೋಟಿ
ಬಳ್ಳಾರಿ ಜಿಲ್ಲೆಯ ಹಡಗಲಿ, ಸಂಡೂರು 1.75 ಕೋಟಿ
ಬಿಜಾಪುರ ಜಿಲ್ಲೆಯ ಸಿಂಧಗಿ, ಮುದ್ದೆಬಿಹಾಳ 2 ಕೋಟಿ
ಬೀದರ್ ಜಿಲ್ಲೆಯ ಹುಮ್ನಾಬಾದ್ 1 ಕೋಟಿ
ಚಿಕ್ಕಮಗಳೂರು ಜಿಲ್ಲೆಯ ಕಡೂರು, ಮೂಡಿಗೆರೆ 90 ಲಕ್ಷ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ 90 ಲಕ್ಷ
ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ 1.56 ಕೋಟಿ
ಹಾಸನ ಜಿಲ್ಲೆಯ ಬೇಲೂರು, ಹಾಸನ 2 ಕೋಟಿ
ಹಾವೇರಿ ಜಿಲ್ಲೆಯ ಬ್ಯಾಡಗಿ 1 ಕೋಟಿ
ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ 80 ಲಕ್ಷ
ಕೊಪ್ಪಳ ಜಿಲ್ಲೆಯ ಸಿಂದನೂರು, ಕುಷ್ಟಗಿ, ಕೊಪ್ಪಳ 2.50 ಕೋಟಿ
ಮಂಡ್ಯ ಜಿಲ್ಲೆಯ ಪಾಂಡವಪುರ 96 ಲಕ್ಷ
ಮೈಸೂರು ಜಿಲ್ಲೆಯ ನಂಜನಗೂಡು, ಟಿ. ನರಸೀಪುರ 1.45 ಕೋಟಿ
ರಾಮನಗರ ಜಿಲ್ಲೆಯ ಕನಕಪುರ 1.81 ಕೋಟಿ,
ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ 1.99 ಕೋಟಿ
ತುಮಕೂರು ಜಿಲ್ಲೆಯ ಸಿರಾ 1 ಕೋಟಿ
ಉಡುಪಿ ಜಿಲ್ಲೆಯ ಕುಂದಾಪುರ- ರು. 36 ಲಕ್ಷ, (ಎಲ್ಲವೂ ರಸ್ತೆ ಕಾಮಗಾರಿಗಳು).
ಉತ್ತರ ಕನ್ನಡ ಜಿಲ್ಲೆ ಸಿರಸಿಯ ಸೇತುವೆ ಕಾಮಗಾರಿಗೆ ರು. 36 ಲಕ್ಷ ರು. ಮಂಜೂರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

