ಕೊನೆಗೂ ಕಾಂಗ್ರೆಸ್‌ಗೆ ಲೋಕಪಾಲ ಮೋಕ್ಷ

ನವದೆಹಲಿ: ಕಾಂಗ್ರೆಸ್‌ಗೆ ಸೋಮವಾರ ಮುಖಭಂಗದ ಮೇಲೆ ಮುಖಭಂಗ. ಗುಜರಾತ್ ಬೇಹುಗಾರಿಕೆ ತನಿಖಾ ಆಯೋಗದ ಮುಖ್ಯಸ್ಥರು ಮತ್ತು ಲೋಕಪಾಲರ ನೇಮಕ ವಿಚಾರದಲ್ಲಿ ಅನಿವಾರ್ಯವಾಗಿ ತನ್ನ ನಿಲುವಿಂದ ಹಿಂದೆ ಸರಿಯಬೇಕಾದ ಮುಜುಗರದ ಸನ್ನಿವೇಶ.
ಬೇಹುಗಾರಿಕೆ ಪ್ರಕರಣದಲ್ಲಿ ನರೇಂದ್ರ ಮೋದಿ ಹಣಿಯಲು ಹೊರಟಿದ್ದ ಕಾಂಗ್ರೆಸ್‌ಗೆ ಮಿತ್ರಪಕ್ಷಗಳಿಂದಲೇ ವಿರೋಧ ವ್ಯಕ್ತವಾಯಿತು. ಹೀಗಾಗಿ ತನಿಖಾ ಆಯೋಗದ ಮುಖ್ಯಸ್ಥರ ನೇಮಕವನ್ನು ಮುಂದಿನ ಸರ್ಕಾರಕ್ಕೆ ಬಿಡುವ ತೀರ್ಮಾನಕ್ಕೆ ಬಂದಿತು.
ಲೋಕಪಾಲದಲ್ಲೂ: ಏತನ್ಮಧ್ಯೆ ಲೊಕಪಾಲರು ಮತ್ತು ಸಂಸ್ಥೆ ಸದಸ್ಯರ ನೇಮಕವನ್ನು ಈಗಿನ ನಿಯಮಗಳಡಿ ನಡೆಸ ಕೂಡದು. ಈ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಪರಾಕಿ ನೀಡಿದೆ.
'ಈಗಿನ ನಿಯಮಗಳಲ್ಲಿ ಪಾರದರ್ಶಕ ಉದ್ದೇಶ ಹೇಗೆ ಸಾಧಿಸುತ್ತೀರಿ' ಎಂದು ಮು.ನ್ಯಾ. ಆರ್.ಎಂ.ಲೋಧಾ, ನ್ಯಾ.ಮದನ್ ಬಿ.ಲೋಕೂರ್, ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಪೀಠ ಖಾರವಾಗಿ ಪ್ರಶ್ನಿಸಿತು. 2013ರ ಡಿಸೆಂಬರ್‌ನಲ್ಲೇ ವಿಧೇಯಕ ಅಂಗೀಕಾರವಾಗಿದ್ದರೂ ನೇಮಕ ವಿಚಾರದಲ್ಲಿ ಇದುವರೆಗೆ ಏನನ್ನೂ ಸಾಧಿಸದ ಕುರಿತಾಗಿಯೂ ಪೀಠ ಆಕ್ಷೇಪ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ಪೀಠದ ಎದುರು ಕೇಂದ್ರ ಸರ್ಕಾರದ ಅಭಿಪ್ರಾಯ ಮಂಡಿಸಿದ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಅವರು, ವಿವಾದಿತ ಅಂಶಗಳನ್ನು ಕೈಬಿಟ್ಟು ಹೊಸ ನಿಯಮಾವಳಿಗಳನ್ನು ರಚಿಸಿದ ಬಳಿಕವೇ ಲೋಕಪಾಲರ ನೇಮಕ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದರು.
ಮೋದಿ ಅವರು ಅಮೇಠಿಯ ನೆಲದಲ್ಲಿ ನನ್ನ ಹುತಾತ್ಮ ತಂದೆಗೆ ಅವಮಾನ ಮಾಡಿದ್ದಾರೆ. ಇದನ್ನು ಅಮೇಠಿಯ ಜನ ಎಂದೂ ಕ್ಷಮಿಸುವುದಿಲ್ಲ. ಮೋದಿಯ ನೀಚ ರಾಜನೀತಿಗೆ ನನ್ನ ಬೂತ್‌ನ ಕಾರ್ಯಕರ್ತರು ಉತ್ತರ ನೀಡುತ್ತಾರೆ. ನೋಡುತ್ತಿರಿ, ಅಮೇಠಿಯ ಒಂದೊಂದು ಮತಗಟ್ಟೆಯಿಂದಲೂ ಇದಕ್ಕೆ ಉತ್ತರ ಬರಲಿದೆ.
-ಪ್ರಿಯಾಂಕಾ ಗಾಂಧಿ,
ಅಮೇಠಿಯಲ್ಲಿ ಪ್ರಚಾರದ ವೇಳೆ ,ಮೋದಿಗೆ ತಿರುಗೇಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


