ಪ್ರಧಾನ ಸುದ್ದಿ

ಶ್ರೀಸುಬುಧೇಂದ್ರರಿಗೆ ಕನಕಾಭಿಷೇಕ

ಶ್ರೀಸುಬುಧೇಂದ್ರರಿಗೆ ಕನಕಾಭಿಷೇಕ
Published On :

ಉಡುಪಿ: ಮಂತ್ರಾಲಯದ ರಾಘವೇಂದ್ರ ಮಠದ ನೂತನ ಪೀಠಾಧೀಶ ಶ್ರೀಸುಬುದೇಂದ್ರ ತೀರ್ಥ ಸ್ವಾಮೀಜಿ ಪೀಠಾರೋಹಣದ ನಂತರ ಪ್ರಥಮ ಬಾರಿಗೆ ಉಡುಪಿಗೆ ಮಂಗಳವಾರ ಆಗಮಿಸಿ ಕೃಷ್ಣ ದರ್ಶನ ಪಡೆದರು. ಅವರನ್ನು ಪರ್ಯಾಯ ಕಾಣಿಯೂರು ಮಠದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಸಂಜೆ 4 ಗಂಟೆಗೆ ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಶ್ರೀಗಳನ್ನು ಮಂತ್ರಘೋಷ, ವಾದ್ಯಘೋಷ, ಚಂಡೆಮೇಳ, ಸ್ತಬ್ಧಚಿತ್ರ ಇತ್ಯಾದಿಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಕರೆತರಲಾಯಿತು.
ಅಲ್ಲಿ ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿಸಿದರು. ನಂತರ ರಾಜಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಠದ ವತಿಯಿಂದ ಮತ್ತು ಉಡುಪಿ ನಗರದ ಜನತೆಯ ಪರವಾಗಿ ಗೌರವಿಸಲಾಯಿತು.
ಸುವರ್ಣ ಕನಕಾಭಿಷೇಕ: ಮಂತ್ರಾಲಯ ಶ್ರೀಗಳನ್ನು ಕಾಣಿಯೂರು ಶ್ರೀಗಳು ಸುವರ್ಣ ಕನಕಾಭಿಷೇಕದೊಂದಿಗೆ ಸನ್ಮಾನಿಸಿದರೆ, ಪ್ರತಿಯಾಗಿ ಮಂತ್ರಾಲಯ ಶ್ರೀಗಳು ಕಾಣಿಯೂರು ಶ್ರೀಗಳಿಗೆ ಮುತ್ತುಗಳಿಂದ ಅಭಿಷೇಕ ಮಾಡಿ ಅಭಿವಂದನೆ ಸಲ್ಲಿಸಿದರು.
ಉಡುಪಿ ನಗರದ ಜನತೆ ಪರವಾಗಿ ನಗರಸಭೆಯ ಅಧ್ಯಕ್ಷೆ ಪಿ. ಯುವರಾಜ್ ಮತ್ತು ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಮಂತ್ರಾಲಯ ಶ್ರೀಗಳನ್ನು ಗೌರವಿಸಿದರು.
ಮಂತ್ರಾಲಯದ ಹಿರಿಯ ವಿದ್ವಾಂಸ ಗಿರಿಯಾಚಾರ್ಯ ಅವರನ್ನು ಕಾಣಿಯೂರು ಶ್ರೀಗಳು, ಉಡುಪಿಯ ವಿದ್ವಾಂಸರಾದ ಹರಿದಾಸ ಉಪಾದ್ಯಾಯ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯರನ್ನು ಸನ್ಮಾನಿಸಿದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಾಚಾರ್ಯ, ಕಾಣಿಯೂರು ಮಠದ ದಿವಾಣ ರಘುಪತಿ ಆಚಾರ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.