ಪ್ರಧಾನ ಸುದ್ದಿ

ಗೋದಾಮಿನಲ್ಲಿ ಆಹಾರ ಕೊಳೆಯಲು ಬಿಟ್ಟವರೇ ನೀಚ ರಾಜಕಾರಣ ಮಾಡುವವರು

ಗೋದಾಮಿನಲ್ಲಿ ಆಹಾರ ಕೊಳೆಯಲು ಬಿಟ್ಟವರೇ ನೀಚ ರಾಜಕಾರಣ ಮಾಡುವವರು
Published On :

ಬಗಾಹ (ಬಿಹಾರ)/ಕೃಷ್ಣನಗರ (ಪ.ಬಂ): ಪ್ರಿಯಾಂಕಾ ವಾದ್ರಾ ತಮ್ಮ ವಿರುದ್ಧ ಪ್ರಯೋಗ ಮಾಡಿದ 'ನೀಚ ರಾಜನೀತಿ' ಪದ ಪ್ರಯೋಗವನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಗುರುವಾರ ಬಿಹಾರದ ಬಗಾಹ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಅವರು ಗುರುವಾರ ಪ್ರಚಾರ ಭಾಷಣ ಮಾಡಿದರು.

ಎರಡೂ ಸ್ಥಳಗಳಲ್ಲಿ ಮೋದಿ ಹೇಳಿದ್ದು


-    ಆಹಾರ ಧಾನ್ಯಗಳನ್ನು ಗೋದಾಮಿನಲ್ಲಿ ಕೊಳೆಯುವುದಕ್ಕೆ ಬಿಟ್ಟವರು ಮತ್ತು ಕಾಮನ್ವೆಲ್ತ್ ಹಗರಣದಲ್ಲಿ ಭಾಗಿಯಾದವರೇ ನೀಚರಾಜಕಾರಣ ಮಾಡುತ್ತಿರುವವರು.
-    ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಉಪಯೋಗ ಮಾಡಲಾಗಿದ್ದ ಟಾಯ್ಲೆಟ್ ಪೇಪರ್ ಖರೀದಿಯಲ್ಲೂ ಅವರು ಹಣಮಾಡಿದ್ದಾರೆ.
-    ಕಾಂಗ್ರೆಸ್ ಪಕ್ಷ ತನ್ನ ಭದ್ರಕೋಟೆಯಾಗಿರುವ ಅಮೇಠಿಯನ್ನು ಕಾಪಾಡಿಕೊಳ್ಳಲಾಗದಷ್ಟು ಹೀನಾಯ ಸ್ಥಿತಿಯಲ್ಲಿದೆ.
-    ಪಾಕಿಸ್ತಾನ ನಮ್ಮ ವೀರ ಯೋಧರ ತಲೆ ಕಡಿದಾಗಲೂ ಯುಪಿಎ ಸರ್ಕಾರ ಆ ದೇಶದ ಪ್ರಧಾನಿಗೆ ಚಿಕನ್ ಬಿರಿಯಾನಿಯ ಔತಣಕೂಟ ಏರ್ಪಡಿಸಿತ್ತು.
-    ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ರಾಹುಲ್, ಸೋನಿಯಾ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲೇ ಇಲ್ಲ.
-    ಅಮೇಠಿಯಲ್ಲಿನ ಮತದಾರರು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಅಹಂಕಾರವನ್ನು ಮುರಿದು ಹಾಕಿದ್ದಾರೆ. ಹೀಗಾಗಿಯೇ ಅವರು ಐದು ವರ್ಷಗಳ ಬಳಿಕ ಕೈಮುಗಿದುಕೊಂಡು ಕ್ಷೇತ್ರಕ್ಕೆ ಬರುವಂತೆ ಮಾಡಿದ್ದಾರೆ.
-    ನರೇಂದ್ರ ಮೋದಿಗೆ ತಡೆಯೊಡ್ಡುವುದೇ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌ನ ಅಜೆಂಡಾ ಆಗಿದೆ. ಅದಕ್ಕೆ ಎಡಪಕ್ಷಗಳು ತೆರೆಮರೆಯಲ್ಲಿ ಸಹಕಾರ ನೀಡುತ್ತಿವೆ.
-    ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಖಾತೆ ತೆರೆಯಲೂ ಸಾಧ್ಯವಿಲ್ಲ. ಅಂಥ ಪರಿಸ್ಥಿತಿಯಲ್ಲಿದೆ ಆ ಪಕ್ಷ.
-   ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ನನ್ನ ವಿರುದ್ಧ ಆಗಾಗ ಸಿಟ್ಟು ಮಾಡುವುದೇ ಕಾಯಕವಾಗಿದೆ.
-    ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿ ಹೆಣ್ಣುಹುಲಿಯಂಥ ಮಹಿಳಾ ನಾಯಕಿ (ಮಮತಾ ಬ್ಯಾನರ್ಜಿ) ಇದ್ದರೂ ಇಂಥ ಪ್ರಕರಣಗಳು ಏಕೆ ಹೆಚ್ಚಾಗಿವೆ?
-   ಉತ್ತಮ ದಿನಗಳು ಬರುತ್ತಿವೆ. ಆದರೆ ದೀದಿಗೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಅಂಥ ದಿನಗಳು ಬರುವುದು ಇಷ್ಟವಿಲ್ಲ ಎಂದು ತೋರುತ್ತದೆ.


ಮೋದಿ ಹೊಗಳಿದರೆ ಚಿಂತೆ

'ನರೇಂದ್ರ ಮೋದಿಯಂಥವರು ನನ್ನನ್ನು ಹೊಗಳಿದರೆ ಚಿಂತೆಯಾಗುತ್ತದೆ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಚಾನೆಲ್ ಒಂದರ ಜತೆ ಮಾತನಾಡಿದ ಅವರು ತಮ್ಮ ಕ್ಷೇತ್ರದಲ್ಲಿ ಮೋದಿ ನಡೆಸಿದ ರ್ಯಾಲಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು. ಕ್ಷೇತ್ರದ ಜನರೊಂದಿಗೆ ಗಾಢವಾದ ಬಾಂಧವ್ಯ ಹೊಂದಿರುವುದಾಗಿ ರಾಹುಲ್ ಹೇಳಿಕೊಂಡರು. 'ಮೋದಿಯವರಿಗೆ ಒಂದು ರೀತಿಯ ಕೋಪವಿದೆ. ಅವರು ಅವರದ್ದೇ ಆದ ರೀತಿಯಲ್ಲಿ ಸಮಸ್ಯೆಗಳನ್ನು ನೋಡುತ್ತಾರೆ. ಅದು ಅವರ ವಿಚಾರ' ಎಂದಿದ್ದಾರೆ.


ನರೇಂದ್ರ ಮೋದಿ ಕೆಳ ಮಟ್ಟದ, ಚಿಲ್ಲರೆ ರಾಜಕೀಯ ನಡೆಸುತ್ತಿದ್ದಾರೆ. ಪ್ರಿಯಾಂಕಾ ವಾದ್ರಾ ಹೇಳಿದ ನೀಚ ರಾಜನೀತಿ ಹೇಳಿಕೆಯನ್ನು ಮೋದಿ ತಮಗೆ ಬೇಕಾದಂತೆ ವಿಮರ್ಶಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅವರು ಮೋದಿಯವರ ಜಾತಿಯನ್ನು ಗುರಿಯಾಗಿರಿಸಿಕೊಂಡು ಹೇಳಿಕೆ ನೀಡಿಲ್ಲ.              
- ಶಶಿ ತರೂರ್, ಕಾಂಗ್ರೆಸ್ ವಕ್ತಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.