ಪ್ರಧಾನ ಸುದ್ದಿ

ನಮೋಲ್ಲಾಸಕ್ಕೆ ಕ್ಷಣಗಣನೆ

ನಮೋಲ್ಲಾಸಕ್ಕೆ ಕ್ಷಣಗಣನೆ
Published On :

ಸುದೀರ್ಘ ಚುನಾವಣಾ ಪ್ರಕ್ರಿಯೆಗೆ ತೆರೆ
 ಬೆ.8ಕ್ಕೆ ಮತ ಎಣಿಕೆ ಆರಂಭ
 ಮಧ್ಯಾಹ್ನ 2ಕ್ಕೆ ಫಲಿತಾಂಶ ಸಂಭವ


ದೇಶದ ದೀರ್ಘಕಾಲದ ಚುನಾವಣಾ ಪ್ರಕ್ರಿಯೆಗೆ ಇಂದು ತೆರೆಬೀಳಲಿದೆ. 1.8 ದಶಲಕ್ಷ ಇವಿಎಂಗಳಲ್ಲಿ ಭದ್ರವಾಗಿರುವ 55 ಕೋಟಿ ಮತಗಳ ಎಣಿಕೆ 12 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಸರ್ವ ಸಿದ್ಧತೆಯೂ ನಡೆದಿದೆ. ಈಗ ಮತಪತ್ರಗಳ ಬದಲಾಗಿ ಇವಿಎಂ ಬಳಕೆಯಲ್ಲಿರುವ ಕಾರಣ ಫಲಿತಾಂಶಕ್ಕಾಗಿ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳುತ್ತದೆ. ಒಟ್ಟಾರೆಯಾಗಿ ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.


ಮತ ಎಣಿಕೆ ಪ್ರಕ್ರಿಯೆ

  1. ಒಂದು ಲೋಕಸಭಾ ಸ್ಥಾನದ ವ್ಯಾಪ್ತಿಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಮೊದಲೇ ನಿಗದಿಯಾದ ಮತ ಎಣಿಕೆ ಕೇಂದ್ರದಲ್ಲಿ ನಡೆಯುತ್ತದೆ. ಯಾವಾಗಲೂ ಮೊದಲಿಗೆ ನಡೆಯುವುದು ಅಂಚೆ ಮತಗಳ ಎಣಿಕೆ.
  2. ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಮುಗಿದ 30 ನಿಮಿಷಗಳ ನಂತರವೇ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆ ಆರಂಭವಾಗುತ್ತದೆ. ಮತಯಂತ್ರಗಳನ್ನಿಟ್ಟ ಕೊಠಡಿಯಿಂದ ಸೂಕ್ತ ಭದ್ರತೆಯುಳ್ಳ ಮಾರ್ಗದ ಮೂಲಕ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ಸಾಗಿಸಿರಲಾಗುತ್ತದೆ.
  3. ಎಣಿಕೆಯ ಪ್ರದೇಶದಲ್ಲಿ ಗರಿಷ್ಠ 14 ಟೇಬಲ್‌ಗಳು ಇರುತ್ತವೆ. ಇನ್ನೊಂದು ರೀತಿ ಹೇಳುವುದಾದರೆ, ಒಮ್ಮೆಗೆ ಕೇವಲ 14 ಇವಿಎಂಗಳ ಮತ ಎಣಿಕೆಯನ್ನಷ್ಟೇ ಮಾಡಲಾಗುತ್ತದೆ.
  4. ಪ್ರತಿಯೊಂದು ಎಣಿಕೆ ಟೇಬಲ್‌ನಲ್ಲಿ ಒಬ್ಬ ಸರ್ಕಾರಿ ಅಧಿಕಾರಿ(ಎಣಿಕೆ ಮಾಡುವವ) ಹಾಗೂ ಅಭ್ಯರ್ಥಿಗಳ ಎಣಿಕೆ ಏಜೆಂಟ್‌ಗಳು ಇರುತ್ತಾರೆ. ಈ ಏಜೆಂಟ್‌ಗಳು ತಮ್ಮ ಅಭ್ಯರ್ಥಿಯ ಮತಗಳೆಷ್ಟು ಎಂಬುದನ್ನು ತಿಳಿಯಲು ಅಲ್ಲಿ ಕುಳಿತಿರುತ್ತಾರೆ.
  5. ಇವಿಎಂಗಳನ್ನು ನಿರ್ವಹಿಸುವ ಸರ್ಕಾರಿ ಅಧಿಕಾರಿ ಹಾಗೂ ಚುನಾವಣಾ ಏಜೆಂಟ್ ಮಧ್ಯೆ ವೈರ್‌ನ ಬೇಲಿಯನ್ನು ಹಾಕಿರಲಾಗುತ್ತದೆ. ಇವಿಎಂಗಳನ್ನು ಏಜೆಂಟ್ ಮುಟ್ಟದಂತೆ ಹಾಗೂ ನಿರ್ವಹಿಸದಂತೆ ತಡೆಯಲು ಈ ಬೇಲಿ ಹಾಕಿರಲಾಗುತ್ತದೆ.
  6. ಪ್ರತಿ ಟೇಬಲ್‌ನಲ್ಲಿ ಹಾಜರಿರುವ ಅಧಿಕಾರಿ ಮೊದಲು ಇವಿಎಂ ಹಾಗೂ ಅದಿರುವ ಸೂಟ್‌ಕೇಸ್‌ನ ಪೇಪರ್ ಸೀಲ್ ಪರಿಶೀಲಿಸುತ್ತಾರೆ. ಇವಿಎಂಗಳಿಗೆ ಯಾರೂ ಹಾನಿ ಆಗಿಲ್ಲ್ಲ, ಎಂಬುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.
  7. ನಂತರ ಸರ್ಕಾರಿ ಅಧಿಕಾರಿಯು ಯಂತ್ರವನ್ನು 'ಆನ್‌' ಮಾಡುತ್ತಾರೆ. ಬಳಿಕ 'ರಿಸಲ್ಟ್‌'(ಫಲಿತಾಂಶ) ಗುಂಡಿಯನ್ನು ಒತ್ತುವ ಮೂಲಕ ಪ್ರತಿ ಅಭ್ಯರ್ಥಿಯು ಗಳಿಸಿದ ಮತಗಳೆಷ್ಟು ಎಂಬುದನ್ನು ನೋಡುತ್ತಾರೆ. ನಂತರ ಈ ಮಾಹಿತಿಯನ್ನು ಫಾರ್ಮ್ 17ಸಿ ಯಲ್ಲಿ ನಮೂದಿಸಲಾಗುತ್ತದೆ.
  8. ಈ ಫಾರ್ಮ್ 17ಸಿ ಯಲ್ಲಿ ಅಭ್ಯರ್ಥಿಗಳ ಏಜೆಂಟ್‌ಗಳ ಸಹಿಯನ್ನು ಪಡೆದು, ಬಳಿಕ ಅದನ್ನು ಮತಗಟ್ಟೆ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ.
  9. ಉಳಿದ 13 ಟೇಬಲ್‌ಗಳಿಂದಲೂ ಫಾರ್ಮ್ 17 ಸಿ ಮತಗಟ್ಟೆ ಅಧಿಕಾರಿಗೆ ತಲುಪುತ್ತದೆ. ಅಧಿಕಾರಿಗಳು ಲೆಕ್ಕಾಚಾರ ಮಾಡಿ ಫಲಿತಾಂಶ ವರ್ಗೀಕರಿಸುತ್ತಾರೆ. ನಂತರ ಅಲ್ಲೇ ಇರುವ ಕಪ್ಪು ಅಥವಾ ಬಿಳಿ ಬೋರ್ಡ್‌ನಲ್ಲಿ ಫಲಿತಾಂಶ ಬರೆದು ಹೊರಗಡೆ ಅದನ್ನು ಘೋಷಿಸಲಾಗುತ್ತದೆ.
  10. ಅಂಚೆ ಮತಗಳ ಎಣಿಕೆಯ ಕೊನೆಯ ಸುತ್ತು ಪೂರ್ಣಗೊಂಡ ಬಳಿಕವೇ ಇವಿಎಂ ಮತ ಎಣಿಕೆಯ ಕೊನೆಯ ಸುತ್ತು ನಡೆಸಲಾಗುತ್ತದೆ.
  11. ಪ್ರತಿ ಸುತ್ತುಗಳ ಫಲಿತಾಂಶವನ್ನು ಮುಖ್ಯ ಚುನಾವಣಾಧಿಕಾರಿಗೆ ತಿಳಿಸುತ್ತಾ ಇರಲಾಗುತ್ತದೆ. ಅಂತಿಮ ಫಲಿತಾಂಶ ಪ್ರಕಟವಾಗುವವರೆಗೂ ಪ್ರಕ್ರಿಯೆ ನಿರಂತರ. ನಂತರ ಈ ಮಾಹಿತಿಯನ್ನು ಆಯೋಗ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.
  • ಇವಿಎಂಗಳನ್ನು ಎಣಿಕೆಯ ದಿನದವರೆಗೂ ಕೇಂದ್ರ ಸಶಸ್ತ್ರ ಪಡೆಯ ಭದ್ರತೆ ಇರುವ ಬಲಿಷ್ಠ ಕೊಠಡಿಗಳಲ್ಲಿ ಇಡಲಾಗುತ್ತದೆ
  • ಕಣಕ್ಕಿಳಿದಿರುವ ಅಭ್ಯರ್ಥಿಯು ತನ್ನ ಚುನಾವಣಾ ಏಜೆಂಟ್ ಆಗಿ ಸರ್ಕಾರಿ ಅಧಿಕಾರಿಯನ್ನು ನೇಮಕ ಮಾಡುವಂತಿಲ್ಲ
10  ಲಕ್ಷ ಅಂದಾಜು ಮತ ಎಣಿಕೆ ಸಿಬ್ಬಂದಿ

5.50  ಲಕ್ಷ ಭದ್ರತಾ ಸಿಬ್ಬಂದಿ

55  ಕೋಟಿ ಇವಿಎಂನಲ್ಲಿ ಭದ್ರವಾಗಿರುವ ಮತಗಳು

989  ಮತ ಎಣಿಕೆ ಕೇಂದ್ರಗಳು

18,78,306  ಚುನಾವಣೆಗೆ ಬಳಸಿದ ಒಟ್ಟು ಇವಿಎಂಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.