ಡಾ. ಮಾರ್ಕ್ ಹಸ್ಸೆ, ರಾಜೇಂದ್ರ ಸಿಂಗ್ಗೆ ಕೃಷಿ ವಿವಿ ಗೌಡಾ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಗುರುವಾರ 27ನೇ ಘಟಿಕೋತ್ಸವದಲ್ಲಿ 2012 ಮತ್ತು 2013ನೇ ಸಾಲಿನ 51 ಪಿಎಚ್.ಡಿ ಸೇರಿ ಒಟ್ಟು 845 ಅಭ್ಯರ್ಥಿಗಳಿಗೆ ಕೃಷಿ ವಿವಿ ಸಹ ಕುಲಾಧಿಪತಿ ಹಾಗೂ ರಾಜ್ಯದ ಕೃಷಿ ಸಚಿವ ಕೃಷ್ಣಬೈರೇಗೌಡ ಪದವಿ ಪ್ರದಾನ ಮಾಡಿದರು.
370 ಬಿಎಸ್ಸಿ ಕೃಷಿ, ಒಂದು ತೋಟಗಾರಿಕೆ, 56 ಅರಣ್ಯ, 69 ಕೃಷಿ ಮಾರುಕಟ್ಟೆ ಮತ್ತು ಸಹಕಾರ ಹಾಗೂ 80 ಗೃಹ ವಿಜ್ಞಾನ ಸೇರಿದಂತೆ ಒಟ್ಟು 576 ಪದವಿ ಪ್ರದಾನ ಮಾಡಲಾಯಿತು. 182 ಎಂಎಸ್ಸಿ ಕೃಷಿ, ಮೂರು ತೋಟಗಾರಿಕೆ, ಒಂಭತ್ತು ಕೃಷಿ ವ್ಯವಹಾರ, ನಾಲ್ಕು ಅರಣ್ಯ ಹಾಗೂ 19 ಗೃಹ ವಿಜ್ಞಾನ ಸೇರಿದಂತೆ ಒಟ್ಟು 160 ಅಭ್ಯರ್ಥಿಗಳು ಪದವಿ ಸ್ವೀಕರಿಸಿದರು.
ಧಾರವಾಡ ಕೃಷಿ ಕಾಲೇಜಿನ ಬಿಎಸ್ಸಿ ಕೃಷಿ ವಿದ್ಯಾರ್ಥಿನಿ ಬಿಹಾರ ಮೂಲದ ನಿಶಾಕುಮಾರಿ 10 ಬಂಗಾರದ ಪದಕ ಪಡೆದು 2012ರ ವರ್ಷದಲ್ಲಿ ಚಿನ್ನದ ಹುಡುಗಿಯಾದರೆ, 2013ರ ಅವಧಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಿಎಸ್ಸಿ ಕೃಷಿ ವಿಷಯದ ಚಿಕ್ಕಮಗಳೂರಿನ ಮಲ್ಲಿಕ್ ಚಿನ್ನದ ಹುಡುಗನಾಗಿ ಹೊರಹೊಮ್ಮಿದರು. ಇದಕ್ಕೂ ಮುಂಚೆ ಅಮೆರಿಕ ಟೆಕ್ಸಾಸ್ ವಿಶ್ವವಿದ್ಯಾಲಯದ ಮಧ್ಯಂತರ ಅಧ್ಯಕ್ಷ ಡಾ. ಮಾರ್ಕ್ ಹಸ್ಸೆ ಹಾಗೂ ರಾಜಸ್ಥಾನದ ನೀರಾವರಿ ತಜ್ಞ ರಾಜೇಂದ್ರ ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಸವಾಲಿನ ಯುಗ: ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ. ಮಾರ್ಕ್ ಹಸ್ಸೆ ಮಾತನಾಡಿ, 20ನೇ ಶತಮಾನ ಸವಾಲಿನ ಯುಗ. ಆಹಾರ, ಪೌಷ್ಟಿಕಾಂಶದ ಭದ್ರತೆ, ಜಾಗತಿಕ ಹಸಿವು, ಆಹಾರ ಸಂರಕ್ಷಣೆ, ಶುದ್ಧ ಮತ್ತು ಅಗತ್ಯಕ್ಕೆ ಬೇಕಾಗುವಷ್ಟು ನೀರು, ಆರ್ಥಿಕ ಬೆಳವಣಿಗೆ ಈ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕೃಷಿ ವಿವಿಗಳು ಸಾಕಷ್ಟು ಆರ್ಥಿಕ ಮತ್ತು ಸಂಪನ್ಮೂಲ ಹೊಂದುವ ಮೂಲಕ ಸಂಘಟಿತ ಪ್ರಯತ್ನ ಮಾಡುವುದು ಅಗತ್ಯ ಎಂದರು.
ರಾಜೇಂದ್ರ ಸಿಂಗ್ ಮಾತನಾಡಿ, ದೇಶದಲ್ಲೇ ಪ್ರತಿಷ್ಠಿತ ಕೃಷಿ ವಿವಿಯಿಂದ ಗೌರವ ದೊರೆತಿರುವುದು ಹೆಮ್ಮೆ ತಂದಿದೆ. ಕೃಷಿಯಲ್ಲೂ ನೀರು ನಿರ್ವಹಣೆ ಅಗತ್ಯವಿದ್ದು, ಕೃಷಿ ವಿದ್ಯಾರ್ಥಿಗಳು ಈ ಕುರಿತು ಹೆಚ್ಚಿನ ಅಧ್ಯಯನ ಮಾಡುವ ಅಗತ್ಯವಿದೆ ಎಂದರು. ಕೃಷಿ ವಿವಿ ಕುಲಪತಿ ಡಾ. ಡಿ.ಪಿ. ಬಿರಾದಾರ ಕೃಷಿ ವಿವಿ ಸಾಧನೆ ಕುರಿತು ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ವಿಜಯ ಕುಮಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

