ಸುಬುಧೇಂದ್ರ ಶ್ರೀಗಳಿಗೆ ತುಳುನಾಡ ಪೌರಸಮ್ಮಾನ
ಮಂಗಳೂರು: ಸಮಾಜದಲ್ಲಿ ಬದಲಾವಣೆ ತರಲು ಮಂತ್ರಾಲಯ ಮಠ ಮಾರ್ಗದರ್ಶನ ಮಾಡಬೇಕು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿಗೆ ಆಗಮಿಸಿದ ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ನಗರದ ಪುರಭವನದಲ್ಲಿ ಗುರುವಾರ 'ತುಳುನಾಡ ಪೌರಸಂಮಾನ' ನೆರವೇರಿಸಿ ಮಾತನಾಡಿದರು. ಧರ್ಮ, ಸಂಸ್ಕೃತಿ ರಕ್ಷಣೆಗೆ ಮಠಗಳು ಕೆಲಸ ಮಾಡಬೇಕು ಎಂದ ಶ್ರೀಗಳು, ಮಂತ್ರಾಲಯ ಗುರುರಾಯರು ಬೃಂದಾವನದಲ್ಲಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಾಜದ ದೋಷ ಗುರುತಿಸಿ ಅದನ್ನು ಸರಿಪಡಿಸುವ ಕೆಲಸವನ್ನು ಗುರುಪೀಠಗಳು ಮಾಡುತ್ತಿವೆ. ಗುರುಪೀಠಗಳು ವಿಷ ಸ್ವೀಕರಿಸಿ ಸಮಾಜಕ್ಕೆ ಅಮೃತ ನೀಡುತ್ತವೆ. ಗುರುದರ್ಶನಕ್ಕೆ ಅಂತರಂಗ ಶುದ್ಧಿ ಇರಬೇಕು, ಸಮಾಜದ ದೋಷ ತಿದ್ದಲು ಗುರುಗಳ ಮಾರ್ಗದರ್ಶನ ಅತ್ಯಗತ್ಯ ಎಂದು ಹೇಳಿದರು. ಪೌರ ಸಂಮಾನ ಸ್ವೀಕರಿಸಿ ಮಾತನಾಡಿದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ, ರಾಘವೇಂದ್ರ ಸ್ವಾಮಿ ಎಲ್ಲರ ಗುರುಗಳಾಗಿದ್ದು, ಅವರನ್ನು ಬೇರೆ ಬೇರೆ ವಿಧದಲ್ಲಿ ಭಕ್ತರು ಉಪಾಸನೆ ಮಾಡುತ್ತಿದ್ದಾರೆ. ಸಿದ್ಧಿ ಪಡೆದವರೂ ಇದ್ದಾರೆ. ಗುರುರಾಯರು ಫಾಸ್ಟ್ಟ್ರಾಕ್ ಗುರುಗಳಾಗಿದ್ದು, ಜನರು ಬೇಗನೆ ಅವರ ಅನುಗ್ರಹ ಪಡೆಯುತ್ತಿದ್ದಾರೆ ಎಂದು ನುಡಿದರು. ಸಮಾರಂಭದಲ್ಲಿ ಮಂತ್ರಾಲಯಶ್ರೀಗಳಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ತುಳುನಾಡಿನ ಶೈಲಿಯಲ್ಲಿ ಗೌರವಾರ್ಪಣೆ ನೆರವೇರಿಸಲಾಯಿತು. ವೇದಮೂರ್ತಿ ನರಸಿಂಹಾಚಾರ್ಯ ಅಭಿನಂದನಾ ಭಾಷಣ ಮಾಡಿದರು.
ಸಮಾರಂಭಕ್ಕೆ ಮೊದಲು ಶರವು ದೇವಳದಿಂದ ಮಂತ್ರಾಲಯಶ್ರೀಗಳನ್ನು ಪುರಭವನದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

