ಪ್ರಧಾನ ಸುದ್ದಿ

ಮೋದಿ ಅಲೆ ವಿರುದ್ಧ ಯಾರೂ ಕಾಂಗ್ರೆಸ್‌ನ್ನು ಗೆಲ್ಲಿಸಲು ಸಾಧ್ಯವಿರಲಿಲ್ಲ

Published On :

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ವಿರುದ್ಧ ಯಾರೂ ಕಾಂಗ್ರೆಸ್‌ಅನ್ನು ಗೆಲ್ಲಿಸುವುದು ಸಾಧ್ಯವಿರಲಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಚುನಾವಣಾ ಫಲಿತಾಂಶ ಪ್ರಕಟವಾಗಿ ವಾರದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಜೊತೆ ಪಕ್ಷದ ಯಾವುದೇ ನಾಯಕರು ಹೊರ ನೋಟಕ್ಕೆ ಅಸಮಾಧಾನದಿಂದಿರಲಿಲ್ಲ. ಆದರೂ, ಚಿಕ್ಕಮಗಳೂರಿಗಿಂತ ಉಡುಪಿ ಜಿಲ್ಲೆಯಲ್ಲಿ ತಮಗೆ ಕಡಿಮೆ ಮತಗಳು ಬಿದ್ದಿವೆ. ತಮ್ಮ ಸೋಲನ್ನು ಇಲ್ಲಿ ಯಾವ ನಾಯಕರೂ ತಪ್ಪಿಸುವಂತಿರಲಿಲ್ಲ. ಆದರೂ, ತಾನು ಇಷ್ಟು ಅಂತರದಿಂದ ಸೋಲುವುದಕ್ಕೇನೂ ಕಾರಣ ಎಂಬುದು ಪರಾಮರ್ಶೆಯಾಗಬೇಕಾಗಿದೆ. ಎಲ್ಲಾ ಬ್ಲಾಕ್ ಮಟ್ಟಕ್ಕೆ ತೆರಳಿ ಈ ಬಗ್ಗೆ ತಾನು ಮತದಾರರೊಂದಿಗೆ ಚರ್ಚಿಸಲಿದ್ದೇನೆ ಎಂದರು.
ಆಧಾರ್, ಅಡಕೆ ಕೂಡ ಕಾರಣ: ಆಧಾರ್ ಕಾರ್ಡ್‌ನ ಗೊಂದಲದಿಂದಾಗಿ ಜನರಿಗೆ ಆಗಿರುವ ತೊಂದರೆ, ಅಸಮಾಧಾನಗಳಿಂದಾಗಿ ತಮಗೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಹಿನ್ನಡೆಯಾಗಿದೆ. ಅಡಕೆ ನಿಷೇಧ ಎಂಬ ಸುಳ್ಳು ಕೂಡ ತಮ್ಮ ವಿರುದ್ಧ ಕೆಲಸ ಮಾಡಿದೆ. ಇದಕ್ಕೆ ಕೊಪ್ಪದ ಕಾಂಗ್ರೆಸ್ ನಾಯಕರೊಬ್ಬರು ಕಾರಣ. ಅವರು ಕೇಂದ್ರ ಸರ್ಕಾರ ಅಡಕೆ ನಿಷೇಧಿಸಬಾರದು ಎಂದು ಹೇಳಿದ್ದೇ ಈ ವಿಷಯ ಚರ್ಚೆಗೆ ಬರುವುದಕ್ಕೆ ಕಾರಣವಾಯಿತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.