ಪ್ರಧಾನ ಸುದ್ದಿ

ಸರ್ಕಾರಿ ಉದ್ಯೋಗ ಬೇಕೆ? ಸಿಗರೇಟ್‌ಗೆ ಗುಡ್ ಬೈ ಹೇಳಿ !

ಸರ್ಕಾರಿ ಉದ್ಯೋಗ ಬೇಕೆ? ಸಿಗರೇಟ್‌ಗೆ ಗುಡ್ ಬೈ ಹೇಳಿ  !
Published On :

ಅಜ್ಮೇರ್: ತಂಬಾಕು ಅಥವಾ ಸಿಗರೇಟ್ ಸೇವನೆಯ ಚಟ ನಿಮಗಿದೆಯೆ? ಸರ್ಕಾರಿ ಕೆಲಸವೂ ಬೇಕು ಎಂಬ ಆಸೆಯನ್ನೂ ಹೊಂದಿದ್ದೀರೇ? ಹಾಗಿದ್ದರೆ ನೀವು ಈ ಎರಡರಲ್ಲಿ ಒಂದನ್ನು ತ್ಯಾಗ ಮಾಡಲೇ ಬೇಕು.
ತಂಬಾಕು/ಸಿಗರೇಟ್ ಸೇವನೆ ತ್ಯಜಿಸಿದರೆ ಮಾತ್ರವೇ ನಿಮಗೆ ಸರ್ಕಾರಿ ಕೆಲಸ ಸಿಗುತ್ತದೆ. ಇಲ್ಲದಿದ್ದರೆ ಕೈಗೆ ಚಿಪ್ಪೇ ಗತಿ. ಅಚ್ಚರಿಯಾದ್ರೂ ಇದು ಸತ್ಯ. ರಾಜಸ್ಥಾನ ಸರ್ಕಾರ ಇಂತಹುದೊಂದು ಆದೇಶ ಹೊರಡಿಸಿದೆ. ಸಿಗರೇಟ್ ಅಥವಾ ತಂಬಾಕು ಪದಾರ್ಥ ಸೇವಿಸುವವರಿಗೆ ಸರ್ಕಾರಿ ಉದ್ಯೋಗ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಈಗ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 182 ಹುದ್ದೆಗಳು ಖಾಲಿಯಿವೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಮೊದಲು ಸಿಗರೇಟ್/ತಂಬಾಕು ಮುಕ್ತರಾಗಿರಬೇಕು. ಹಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವರು ಅರ್ಹರಾಗುತ್ತಾರೆ ಎಂದು ವಸುಂಧರಾ ರಾಜೇ ಸರ್ಕಾರ ಹೇಳಿದೆ. ಅಭ್ಯರ್ಥಿಯು ಮೊದಲು, ಸರ್ಕಾರದ ನೀತಿ ನಿಬಂಧನೆಗಳನ್ನು  ಪಾಲಿಸುತ್ತೇನೆ ಎಂದು ಬರೆದಿರುವ ಅಫಿಡವಿಟ್‌ಗೆ ಸಹಿ ಮಾಡಲೇ ಬೇಕು. ನಂತರವೇ ಮುಂದಿನ  ಪ್ರಕ್ರಿಯೆ ಆರಂಭಿಸಲಾಗುತ್ತದೆ. ಒಟ್ಟಾರೆ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರು ಕೆಟ್ಟ ಚಟಗಳಿಗೆ ಗುಡ್ ಬೈ ಹೇಳಲೇಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.