ನರೇಂದ್ರ ಮೋದಿ ಒಬ್ಬರೇ ಪ್ರಾಮಾಣಿಕರಾಗಿದ್ದರೆ ಸಾಕಾ?
.jpg?w=1200&q=68&auto=format,compress)
ಒಂದೆಡೆ ದಕ್ಷತೆಗೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಎಸ್ಪಿ ಮಧುಕರ ಶೆಟ್ಟಿ ಹತಾಶೆಗೊಂಡು ದೇಶವನ್ನೇ ಬಿಟ್ಟುಹೋಗಿದ್ದರೆ, ಮತ್ತೊಂದೆಡೆ, ಕರ್ನಾಟಕದ ಅತ್ಯಂತ ದಕ್ಷ, ಶುದ್ಧ ಹಸ್ತ, ಪ್ರಾಮಾಣಿಕ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಮೇಲೆ ಬಹಿರಂಗವಾಗಿ ಹಲ್ಲೆ! ಕನಿಷ್ಠ ಆಕೆ ಒಬ್ಬ ಮಹಿಳೆ ಎಂಬುದನ್ನೂ ಮರೆಯುವಷ್ಟು ಸೌಜನ್ಯ ಹಾಗೂ ಅಂತಃಕರಣವನ್ನು ಕಳೆದುಕೊಂಡಿತೇ ಈ ವ್ಯವಸ್ಥೆ?
ಅದಿರಲಿ, ಇಚ್ಛಾ ಸರಸವಾಗಿದ್ದರೂ ಬಲವಂತವೆಂದು ಬೊಬ್ಬಿರಿಯುವವರ ಪರ ಕಣ್ಣೀರು ಸುರಿಸುವ ನಮ್ಮ ಮಹಿಳಾ ಹೋರಾಟಗಾರ್ತಿಯರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ? ಅವರ ಸಂವೇದನೆ ಎಲ್ಲಿ ಸತ್ತು ಬಿದ್ದಿದೆ? ರಾಜ್ಯ ಮಹಿಳಾ ಆಯೋಗಕ್ಕೆ ಆ ಘಟನೆಯನ್ನು ಖಂಡಿಸಬೇಕು ಎಂಬ ಸಾಮಾನ್ಯ ಕಾಳಜಿಯೂ ಇಲ್ಲವೇ? ಮಹಿಳಾ ಅಧಿಕಾರಿಯ ಮೇಲೆ ಹಲ್ಲೆ ನಡೆದರೆ ಇವರೇಕೆ ದನಿ ಎತ್ತುತ್ತಿಲ್ಲ? ರಶ್ಮಿ ಮೇಲೆ ನಡೆದಿರುವ ಆಕ್ರಮಣ ಇವರಿಗೆ ಮಹಿಳೆಯರ ಮೇಲೆ ಮಾಡಿದ ದೌರ್ಜನ್ಯವೆಂದೆನಿಸುತ್ತಿಲ್ಲವೇ? ಒಬ್ಬ ಮೋದಿಯವರು ಪ್ರಾಮಾಣಿಕರಾಗಿದ್ದರೆ ಸಾಕಾ? ಅಶೋಕ್ ಖೇಮ್ಕಾ, ದುರ್ಗಾ ಶಕ್ತಿ ನಾಗ್ಪಾಲ್, ರಶ್ಮಿ ಅವರಂತಹ ಪ್ರಾಮಾಣಿಕ ಅಧಿಕಾರಿಗಳೂ ನಮ್ಮ ವ್ಯವಸ್ಥೆ ಸರಿಪಡಿಸಲು ಅಗತ್ಯವಲ್ಲವೇ?
ಸ್ವಯಂ ಪ್ರೇರಿತ ವಿಚಾರಣೆ
ಮೈಸೂರು: ಆಡಳಿತ ಮತ್ತು ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿ ರಶ್ಮಿ ಮಹೇಶ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಆಯೋಗವು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ. ಘಟನೆಗೆ ಸಂಬಂಧಿಸಿ ಪ್ರಾಥಮಿಕ ವರದಿಯನ್ನು ಕೂಡಲೇ ಆಯೋಗಕ್ಕೆ ಸಲ್ಲಿಸಲು ಅಧ್ಯಕ್ಷೆ ಮಂಜುಳಾ ಮಾನಸ ಪೊಲೀಸರಿಗೆ ಸೂಚಿಸಿದ್ದಾರೆ.
-ಪ್ರತಾಪ್ ಸಿಂಹ, ಸಂಸದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


.jpg?w=64&q=30&auto=format,compress)