ನಿತ್ಯಾ ಪುರುಷತ್ವ ಪರೀಕ್ಷೆ ಪೂರ್ಣ: ನಾಳೆ ಸಿಐಡಿಗೆ ವರದಿ

ಬೆಂಗಳೂರು: ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡಿದ್ದು, ಆಸ್ಪತ್ರೆಯ ವೈದ್ಯರು ನಾಳೆಯೇ ಸಿಐಡಿ ಪೊಲೀಸರಿಗೆ ವರದಿ ಸಲ್ಲಿಸುವುದಾಗಿ ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಣ್ಣ ಹೇಳಿದ್ದಾರೆ.
ಡಾ. ಚಂದ್ರಶೇಖರ್ ರಟ್ಕಲ್ ನೇತೃತ್ವದ ತಂಡ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಅಗತ್ಯವಾದ ಎಲ್ಲಾ ಪರೀಕ್ಷೆಗಳನ್ನು ನಡೆಸಿದ್ದು, ನಾಳೆ ತನಿಖಾಧಿಕಾರಿಗೆ ವರದಿ ಸಲ್ಲಿಸಲ್ಲಿದ್ದಾರೆ.
ಪುರುಷತ್ವ ಪರೀಕ್ಷೆಯಲ್ಲಿ ನಿತ್ಯಾನಂದ ಪಾಸಾಗಿದ್ದಾನೆ ಎನ್ನಲಾಗುತ್ತಿದ್ದು, ಆತನ ಜನನಾಂಗ ಉದ್ರೋಕಗೊಂಡಿದೆ ಮತ್ತು ವೀರ್ಯಾಣುಗಳ ಸ್ಥಿತಿ, ವೃಷಣಗಳ ಬೆಳವಣೆಗೆ ಸಹಜವಾಗಿದೆ ಎನ್ನಲಾಗುತ್ತಿದೆ.
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಗಾಗಿರುವ ನಿತ್ಯಾನಂದನ ಜನನಾಂಗ ಸಹಜ ಬೆಳವಣಿಯಾಗಿರುವುದು ಪತ್ತೆಯಾಗಿದ್ದು, ಪರೀಕ್ಷೆ ವೇಳೆ ನಿತ್ಯಾನಂದನ ಜನನಾಂಗ ಉದ್ರೇಕಗೊಂಡಿದೆ. ರಕ್ಷ ಪರೀಕ್ಷೆಯಲ್ಲೂ ಅವನ ಲೈಂಗಿಕ ಸಾಮರ್ಥ್ಯ ದೃಢಗೊಂಡಿದೆ ಎನ್ನಲಾಗುತ್ತಿದೆ.
ಈ ಹಿಂದೆ ನಿತ್ಯಾನಂದ ತಾನು ಆರು ವರ್ಷದ ಬಾಲಕ ತನ್ನ ಕೈಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿಲ್ಲ ಎಂದು ಹೇಳಿಕೊಂಡಿದ್ದ ಆದರೆ ಇಂದು ನಡೆದ ಮೂರು ಪರೀಕ್ಷೆಗಳಲ್ಲೂ ಪುರುಷತ್ವ ಸಾಬೀತಾಗಿರುವ ಸಾಧ್ಯತೆ ಇದೆ.
ಪುರುಷತ್ವ ಪರೀಕ್ಷೆ ಹೇಗೆ ನಡೆಯಿತು...
ಪುರುಷತ್ವ ಪರೀಕ್ಷೆಯಲ್ಲಿ ಮುಖ್ಯವಾಗಿ ನಿತ್ಯಾನಂದನ ಜನನಾಂಗದ ಉದ್ರೇಕ ಸಾಮರ್ಥ್ಯ ಹಾಗೂ ವೃಷಣಗಳ ಸಾಮರ್ಥ್ಯವನ್ನು ತಿಳಿಯುವುದಕ್ಕಾಗಿ ತಜ್ಞ ವೈದ್ಯರ ತಂಡ ಆತನಿಗೆ ಹಸ್ತ ಮೈಥುನ ಮಾಡಿಕೊಳ್ಳುವಂತೆ ಸೂಚಿಸಿದರು. ಆದರೆ ಇದಕ್ಕೆ ಒಪ್ಪಿಕೊಳ್ಳದ ನಿತ್ಯಾನಂದ ತಾನು ಸನ್ಯಾಸಿಯಾಗಿದ್ದು, ಹಸ್ತಮೈಥುನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ. ಆದರೆ ವೈದ್ಯರು ಹಾಗೂ ಎನ್ಜಿಒವೊಂದರ ಇಬ್ಬರು ಯುವತಿಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡು ನಿತ್ಯಾನಂದನ ಮನವೊಲಿಸುವಲ್ಲಿ ಯಶಸ್ವಿಯಾದರು.
ಹಸ್ತಮೈಥುನಕ್ಕೆ ನಿತ್ಯಾ ಒಪ್ಪಿಕೊಂಡ ನಂತರ ಆತನ ಕೈಗೆ ಒಂದು ಕಾಮ ಪ್ರಚೋದಕ ಪುಸ್ತಕ ಕೊಟ್ಟು, ಒಂದು ಕೊಣೆಗೆ ಕಳುಹಿಸಿಕೊಡಲಾಯಿತು.
ಪುರುಷತ್ವ ಪರೀಕ್ಷೆಯಿಂದ ಬಳಲಿದ ನಿತ್ಯಾನಿಗೆ ವಿಶ್ರಾಂತಿ, ಬಳಿಕ ಇಸಿಜಿ ಪರೀಕ್ಷೆ
ಪುರುಷತ್ವ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಪರೀಕ್ಷೆಗಳಿಂದ ಸ್ವಾಮಿ ನಿತ್ಯಾನಂದ ದೈಹಿಕವಾಗಿ ಸಾಕಷ್ಟು ಬಳಲಿದಂತೆ ಕಂಡುಬಂದರು. ಹೀಗಾಗಿ ಆಸ್ಪತ್ರೆಯ ವೈದ್ಯರು ನಿತ್ಯಾನಂದನಿಗೆ ಎಸಿ ರೂಮ್ನಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯಲು ಅವಕಾಶ ನೀಡಿದರು. ಬಳಿಕ ಅವರಿಗೆ ಇಸಿಜಿ ಪರೀಕ್ಷೆ ನಡೆಸಿದರು.
ನಿತ್ಯಾ ಪುರುಷತ್ವ ಪರೀಕ್ಷೆಯ ಪೂರ್ಣ ವಿವರ
ಬೆಳಗ್ಗೆ 7:45 - ವಿಕ್ಟೋರಿಯಾ ಅಸ್ಪತ್ರೆ ನಿತ್ಯಾನಂದ ಆಗಮನ
ಬೆಳಗ್ಗೆ 8:00 - ಉಪಾಹಾರ ಸೇವಿಸಿದ ನಿತ್ಯಾನಂದ
ಬೆಳಗ್ಗೆ 9 - ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ಆರಂಭ
ಬೆಳಗ್ಗೆ 9:15 - ಪರೀಕ್ಷೆಗೆ ಸಿ.ಎಸ್.ರಟ್ಕಲ್ ಅವರಿಂದ ಮಾರ್ಗದರ್ಶನ
ಬೆಳಗ್ಗೆ 9:30 - ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ
* ನಾಲ್ವರು ವೈದ್ಯರಿಂದ ಪರೀಕ್ಷೆ. ಶಿಶ್ನ ಮತ್ತು ವೃಷಣ ಪರೀಕ್ಷೆ ಮಾಡಿದ ವೈದ್ಯರು
* ಪ್ರಾಥಮಿಕ ಪರೀಕ್ಷೆಯಿಂದ ನಿತ್ಯಾ ಪುರುಷನೆಂದು ಸಾಬೀತು ಎಂದು ವಿಕ್ಟೋರಿಯಾ ಆಸ್ಪತ್ರೆ ಮೂಲಗಳಿಂದ ಮಾಹಿತಿ
* ಮೊದಲು ಹಸ್ತ ಮೈಥನಕ್ಕೆ ಒಪ್ಪದ ನಿತ್ಯಾನಂದ, ವೈದ್ಯರ ಮನವೊಲಿಕೆ ನಂತರ ಹಸ್ತಮೈಥುನಕ್ಕೆ ಒಪ್ಪಿಗೆ
* ಡಾ| ಸಿ.ಚಂದ್ರಶೇಖರ್ ಕೇಳಿದ 18 ಪ್ರಶ್ನೆಗಳಿಗೆ ನಿತ್ಯಾನಂದನಿಂದ ಸಕರಾತ್ಮಕ ಉತ್ತರ
* ಕೆಲವೊಂದು ಪರೀಕ್ಷೆಗಳಿಗೆ ನಿತ್ಯಾನಂದನಿಂದ ಆಕ್ಷೇಪ
* ನಿತ್ಯಾನಂದನಿಗೆ ಆಶ್ರಮದಿಂದಲೇ ತಿಂಡಿ ವ್ಯವಸ್ಥೆ. ಆತನ ಶಿಷ್ಯರಿಗೂ ಪ್ರತ್ಯೇಕ ವ್ಯವಸ್ಥೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


