ಯೆಮನ್ ಗಲಭೆ: ೧೦ ದೇಶದ ನಾಗರಿಕರನ್ನು ರಕ್ಷಿಸಿದ ಚೈನಾ

ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು
ಗಲಭೆ ನಿರತ ಯೆಮನ್
ಗಲಭೆ ನಿರತ ಯೆಮನ್

ಬೀಜಿಂಗ್: ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು ರಕ್ಷಿಸುವ ಮೊದಲ ಪ್ರಯತ್ನ ಚೈನಾದ್ದಾಗಿದೆ.

ಯೆಮನ್ ನ ಆಡೆನ್ ನಿಂದ ಜಿಬೂಟಿಗೆ ಪಾಕಿಸ್ತಾನದ ೧೭೬ ಜನರನ್ನು ಸೇರಿದಂತೆ ಭಾರತ, ಇಥಿಯೋಪಿಯ, ಸಿಂಗಪುರ, ಇಟಲಿ, ಜರ್ಮನಿ, ಪೋಲೆಂಡ್, ಐರ್ಲೆಂಡ್, ಬ್ರಿಟನ್, ಕೆನಡಾ ಮತ್ತು ಯೆಮನ್ ನಾಗರಿಕರನ್ನು ರಕ್ಷಿಸಿರುವ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯು ಚುನ್ಯಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಚೈನಾ ೫೦೦ ಜನರನ್ನು ಯೆಮನ್ ನಿಂದ ರಕ್ಷಿಸಿತ್ತು.

ಈ ವಿದೇಶಿ ನಾಗರಿಕರು ನೆನ್ನೆ ಯೆಮನ್ ನಿಂದ ಜಿಬೂಟಿಗೆ ಚೈನಾದ ಯುದ್ಧನೌಕೆ ಏರಿ ಬಂದಿದ್ದಾರೆ. ವಿದೇಶಗಳ ಮನಿವಿಯ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿರುವುದಾಗಿ ಚೈನಾ ತಿಳಿಸಿದೆ.

ಇದೇ ಮೊದಲಬಾರಿಗೆ ಗಲಭೆ ನಿರತ ಪ್ರದೇಶದಿಂದ ವಿದೇಶಿಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಚೈನಾ ಕೈಗೊಂಡಿರುವುದು. "ಇದು ಅಂತರಾಷ್ಟ್ರೀಯತನ ಮತ್ತು ಮಾನಾವತವಾದದಲ್ಲಿ ಚೈನಾದ ನಂಬಿಕೆಯನ್ನು ಧೃಢಪಡಿಸುತ್ತದೆ" ಎಂದು ಚೈನಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com