ಮಶರತ್ ಆಲಂ ವಿರುದ್ಧ ದೇಶದ್ರೋಹ ಆರೋಪ ಪ್ರಕರಣ ದಾಖಲು

ನವದೆಹಲಿಯಿಂದ ಏರುತ್ತಿರುವ ಒತ್ತಡಕ್ಕೆ ಮಣಿದಿರುವ ಜಮ್ಮು ಕಾಶ್ಮೀರ ಸರ್ಕಾರ, ಸದ್ಯಕ್ಕೆ ಗೃಹ ಬಂಧನದಲ್ಲಿದ್ದ ಮಶರತ್ ಆಲಂ ಮೇಲೆ
ಮಶರತ್ ಆಲಂ
ಮಶರತ್ ಆಲಂ
Updated on: 

ಶ್ರೀನಗರ: ನವದೆಹಲಿಯಿಂದ ಏರುತ್ತಿರುವ ಒತ್ತಡಕ್ಕೆ ಮಣಿದಿರುವ ಜಮ್ಮು ಕಾಶ್ಮೀರ ಸರ್ಕಾರ, ಸದ್ಯಕ್ಕೆ ಗೃಹ ಬಂಧನದಲ್ಲಿದ್ದ ಮಶರತ್ ಆಲಂ ಮೇಲೆ ರಾತ್ರೋರಾತ್ರಿ ದೇಶದ ಮೇಲೆ ಯುದ್ಧ ಸಾರುವ ರಾಷ್ಟ್ರದ್ರೋಹ ಆರೋಪವನ್ನು ಹೊರಿಸಿ, ಅಧಿಕೃತವಾಗಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಶುಕ್ರವಾರ ತಡರಾತ್ರಿ ಪೊಲೀಸರು ಸೆಕ್ಷನ್ ೧೨೧ಎ (ದೇಶದ ವಿರುದ್ಧ ಯುದ್ಧ ಸಾರುವುದು) ಮತ್ತು ಸೆಕ್ಷನ್ ೧೨೪(ರಾಷ್ರದ್ರೋಹ) ಆರೋಪಗಳನ್ನು ಸೇರಿಸಿ ಪ್ರತ್ಯೇಕವಾದಿ ಮಾಶರತ್ ಆಲಂ ವಿರುದ್ಧ ಎಫ್ ಐ ಆರ್ ದಾಖಲಿಸಿದೆ. ಈ ಹೆಚ್ಚುವರಿ ಆರೋಪಗಳನ್ನು ಹೊರಿಸಿದ ನಂತರ ಬಡ್ಗಂನ ಮುಖ್ಯ ಮೆಜೆಸ್ಟ್ರೇಟ್ ನ್ಯಾಯಾಧೀಶರ(ಸಿಜೆಎಂ) ಎದುರು ಹಾಜರುಪಡಿಸಿದ್ದಾರೆ. ಮೆಜೆಸ್ಟ್ರೇಟ್ ಆಲಂನನ್ನು ಒಂದು ವಾರದವರೆಗೆ ಪೋಲಿಸ್ ಕಸ್ಟಡಿಗೆ ಆದೇಶಿಸಿದ್ದಾರೆ.

ಹಳೆ ಶ್ರೀನಗರದ ಜೈಂದಾರ್ ಮೊಹಲ್ಲ ಪ್ರದೇಶದಲ್ಲಿ ಶುಕ್ರವಾರ ಮುಂಜಾಗ್ರತಾ ಗೃಹಬಂಧನದಲ್ಲಿರಿಸಿದ್ದ ಆಲಂನನ್ನು ಮೊದಲು ಹತ್ತಿರದ ಶಾಹೀದ್ ಗಂಜ್ ಪೊಲೀಸ್ ಠಾಣೆಗೆ ವರ್ಗಾಯಿಸಿ ನಂತರ ಕೇಂದ್ರ ಬಡ್ಗಾಂ ಜಿಲ್ಲೆಯ ಹುಮ್ಹಾಮ ಪೋಲಿಸ್ ಠಾಣೆಗೆ ವರ್ಗಾಯಿಸಲಾಗಿದೆ. ಏಪ್ರಿಲ್ ೧೪ರಂದು ನಡೆದ ಪ್ರತ್ಯೇಕವಾದಿ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಹಾರಿಸಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಲ್ಲದೆ, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಆಲಂ ಮತ್ತು ಸಯ್ಯದ್ ಅಲಿ ಗಿಲಾನಿ ವಿರುದ್ಧ ಹುಮ್ಹಾಮ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು.

ಮೂಲಗಳ ಪ್ರಕಾರ ಕೆಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರಿಗೆ ತೀವ್ರ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ದೇಶವಿರೋಧಿ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಎಂಬುದನ್ನು ಮುಫ್ತಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಆಲಂ ಅವರ ಬಂಧನವನ್ನು ವಿರೋಧಿಸಿ ಕಾಶ್ಮೀರಿ ಕಣಿವೆ ಬಂಧ್ ಗೆ ಗಿಲಾನಿ ಕರೆ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com