ಟೆಕ್ಸಾಸ್ ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ

ಅಮೇರಿಕಾದ ಹಿಂದು ದೇವಾಲಯವೊಂದರ ಮೇಲೆ ದಾಳಿ ನಡೆಸಿರುವ ಕೆಲವು ಕಿಡಿಗೇಡಿಗಳು ದೇವಾಲಯದ ಗೋಡೆಗಳ ಮೇಲೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಅಮೇರಿಕಾದ ಹಿಂದು ದೇವಾಲಯವೊಂದರ ಮೇಲೆ ದಾಳಿ ನಡೆಸಿರುವ ಕೆಲವು ಕಿಡಿಗೇಡಿಗಳು ದೇವಾಲಯದ ಗೋಡೆಗಳ ಮೇಲೆ ಅಸಭ್ಯ ಚಿತ್ರಗಳನ್ನು ಬಿಡಿಸಿದ್ದಾರೆ.

ಉತ್ತರ ಟೆಕ್ಸಾಸ್ ನ ಓಲ್ಡ್ ಲೇಕ್ ಹೈಲ್ಯಾಂಡ್ಸ್ ನ ದೇವಾಲಯದ ಬಾಗಿಲಿನ ಮೇಲೆ ಸಂಖ್ಯೆ '೬೬೬'ನ್ನು ಚಿತ್ರಿಸಿರುವುದಲ್ಲದೆ, ಶಿಲುಬೆಯನ್ನು ತಲೆಕೆಳಕಾಗಿ ಸ್ಪ್ರೆ ಮಾಡಿ ಚಿತ್ರಿಸಿದ್ದಾರೆ.

ಇದು ಸೋಮವಾರ ಕಂಡುಬಂದಿದೆ ಎಂದು ದೇವಾಲಯ ಸಮಿತಿಯ ಕೃಷ್ಣ ಸಿಂಗ್ ತಿಳಿಸಿದ್ದಾರೆ.

"ಇದು ನಿಜಕ್ಕೂ ಆಘಾತಕಾರಿ... ಇದು ಇಡಿ ಸಮುದಾಯವನ್ನು ತೊಂದರೆಗೀಡುಮಾಡಿದೆ" ಎಂದು ಸಿಂಗ್ ಹೇಳಿದ್ದಾರೆ.

ಡಲ್ಲಾಸ್ ಪೊಲೀಸ್ ಪತ್ತೇದಾರಿ ತಂಡ ಕಿಡೀಗೇಡಿಗಳಿಗಾಗಿ ಹುಡುಕಾಟ ನಡೆಸಿದೆ.

ಈಗ ದೇವಸ್ಥಾನದ ಸುತ್ತ ಬೇಲಿ ಕಟ್ಟಲು ಭಕ್ತಾದಿಗಳು ನಿರ್ಧರಿಸಿದ್ದು ಇದಕ್ಕೆ ಹಿಂದುಗಳು ಹಿಂದುಗಳೇತರ ಭಕ್ತಾದಿಗಳಿಂದಲೂ ಪೂರಕ ಬೆಂಬಲ ವ್ಯಕ್ತವಾಗಿದೆ.

ಮೂರು ತಿಂಗಳಿನಿಂದ ಅಮೇರಿಕಾದಲ್ಲಿ ಹಿಂದು ದೇವಾಲಯಗಳ ಮೇಲೆ ನಡೆದ ದಾಳಿಯಲ್ಲಿ ಇದು ಮೂರನೆಯದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com