ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ.

ಮೋದಿ ಅವರು ಧೌಲಾ ಕೌನ್ ನಿಂದ ದ್ವಾರಕಾವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಪ್ರಕಟಿಸಿದ್ದಾರೆ.

"ಪ್ರಯಾಣವನ್ನು ಬಹಳ ಚೆನ್ನಾಗಿತ್ತು. ದೆಹಲಿ ಮೆಟ್ರೋಗೆ ಧನ್ಯವಾದಗಳು. ಶ್ರೀಧರನ್ ಅವರಿಗೆ ಧನ್ಯವಾದಗಳು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ "ಶ್ರೀಧರನ್ ಅವರು ಮೆಟ್ರೋ ಅನುಭವದ ಬಗ್ಗೆ ನನಗೆ ಯಾವಾಗಲೂ ಹೇಳುತ್ತಿದ್ದರು. ದ್ವಾರಕಾಗೆ ಹೋಗಬೇಕಾದರೆ ನನಗೆ ಇಂದು ಈ ಅನುಭವ ಸಿಕ್ಕಿತು" ಎಂದಿದ್ದಾರೆ ಮೋದಿ.

ಮಾಜಿ ದೆಹಲಿ ಮೆಟ್ರೋ ಅಧ್ಯಕ್ಷ ಇ ಶ್ರೀಧರನ್ ಅವರನ್ನು 'ಮೆಟ್ರೋ ಮನುಷ್ಯ' ಎಂದೇ ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com