ಮಹಿಳೆಯರ ವಿರುದ್ಧ ಅಪರಾಧ: ಎಎಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಮಹಿಳೆಯರ ಸುರಕ್ಷೆತೆಗೆ ಕ್ರಮಗಳನ್ನು ಕೈಗೊಳ್ಳುವುದಾಗಿ ಎಎಪಿ ಪಕ್ಷ ತಿಳಿಸಿದ್ದರು ಆದರೆ ಪ್ರತಿ ದಿನ ೫ ರೇಪುಗಳು ಮತ್ತು ೧೦ ಲೈಂಗಿಕ ದೌರ್ಜನ್ಯಗಳು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಮಹಿಳೆಯರ ಸುರಕ್ಷೆತೆಗೆ ಕ್ರಮಗಳನ್ನು ಕೈಗೊಳ್ಳುವುದಾಗಿ ಎಎಪಿ ಪಕ್ಷ ತಿಳಿಸಿದ್ದರು ಆದರೆ ಪ್ರತಿ ದಿನ ೫ ರೇಪುಗಳು ಮತ್ತು ೧೦ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ, ಎಎಪಿ ಸರ್ಕಾರ ಮಹಿಳೆಯರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸುವಂತೆ ಆಗ್ರಹಿಸಿದೆ.

ಬಹಳ 'ಗಂಭೀರ ವಿಷಯ" ಎಂದಿರುವ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯ ವಕ್ತಾರ ಶರ್ಮಿಷ್ಠ ಮುಖರ್ಜಿ, ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಗಾಗಿ ಆಗ್ರಹಿಸಿ ಲೆಫ್ಟಿನೆಂಟ್ ನಜೀಬ್ ಜಂಗ್ ಅವರನ್ನು ಶೀಘ್ರದಲ್ಲೆ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಮ್ಮ ಚುನಾವಣಾ ಪ್ರಚಾರ ವೇಳೆಯಲ್ಲಿ ಮಹಿಳೆಯರಿಗಾಗಿ ಸುರಕ್ಷತೆಯನ್ನು ಸುಧಾರಿಸಲಾಗುವುದು ಎಂದು ಹೇಳಿದ್ದರೂ ಈ ನಿಟ್ಟಿನಲ್ಲಿ ಎಎಪಿ ಸರ್ಕಾರ ಏನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

"ದೆಹಲಿಯಲ್ಲಿ ಪ್ರತಿ ದಿನ ಐದು ರೇಪ್ ಮತ್ತು ೧೦ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಘಟಿಸುತ್ತಿವೆ. ಆದುದರಿಂದ ಎಎಪಿ ಸರ್ಕಾರ ಈ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ನಾವು ಕೇಳಲಿಚ್ಚಿಸುತ್ತೇವೆ. ಈ ಅಪರಾಧಗಳನ್ನು ನಿಲ್ಲಿಸುತ್ತೇವೆ ಎಂದು ಚುನಾವಣಾ ಪ್ರಚಾರ ಸಮಯದಲ್ಲಿ ನೀಡಿದ ವಚನಕ್ಕೆ ಏನಾಯಿತು ಎಂದು ಪ್ರಶ್ನಿಸುತ್ತಿದ್ದೇವೆ" ಎಂದು ಅವರು ಪತ್ರಿಕಾ ಘೋಷ್ಟಿಯಲ್ಲಿ ತಿಳಿಸಿದ್ದಾರೆ.

ದೆಹಲಿ ಪೊಲೀಸರು ನೀಡಿರುವ ಅಂಕಿ ಅಂಶಗಳ ಪ್ರಕಾರ ಈ ವರ್ಷದ ಮೊದಲ ಎರಡು ತಿಂಗಳಲ್ಲೇ ೩೦೦ ರೇಪ್ ಗಳು ಮತ್ತು ೫೦೦ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದವರು ತಿಳಿಸಿದ್ದಾರೆ.

"ಅವರು ಈ ಹಿಂದೆ ಹೇಳಿದ್ದಂತೆ ದೆಹಲಿ ಸಾರ್ವಜನಿಕ ಬಸ್ಸುಗಳಲಿ ಎಷ್ಟು ಜನ ಮಾರ್ಷಲ್ ಗಳನ್ನು ನೇಮಿಸಲಾಗಿದೆ ಎಂದು ನಾವು ಎಎಪಿ ಪಕ್ಷವನ್ನು ಕೇಳುತ್ತೇವೆ ಹಾಗೆಯೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೊನೆಯ ಕ್ಷಣದ ಸಾರಿಗೆ ವ್ಯವಸ್ಥೆ ಮಾಡುವ ಹೇಳಿಕೆ ಏನಾಯಿತು" ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಮುಖರ್ಜಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com