ಕಲ್ಯಾಣಿ ಬ್ಯಾಂಕ್ ಒಂದರಿಂದ ೪೭ಲಕ್ಷ ದೋಚಿದ ದರೋಡೆಕೋರರು

ಪಶ್ಚಿಮ ಬಂಗಾಳನ ನಾಡಿಯ ಜಿಲ್ಲೆಯ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಿಂದ ಸಶಸ್ತ್ರಧಾರಿ ದರೋಡೆಕೋರರು ೪೭ ಲಕ್ಷ ರೂ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲ್ಯಾಣಿ: ಪಶ್ಚಿಮ ಬಂಗಾಳನ ನಾಡಿಯ ಜಿಲ್ಲೆಯ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಿಂದ ಸಶಸ್ತ್ರಧಾರಿ ದರೋಡೆಕೋರರು ೪೭ ಲಕ್ಷ ರೂ ದೋಚಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಹಾಬಾದ್ ಬ್ಯಾಂಕ್ ನ ಇಲ್ಲಿನ ಶಾಖೆ ತೆರೆದ ಕೂಡಲೆ ನುಗ್ಗಿರುವ ಸಶಸ್ತ್ರಧಾರಿ ದರೋಡೆಕೋರರು, ಬಂದೂಕುಗಳನ್ನು ತೋರಿಸಿ ಹಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್ ನಿಂದ ಸುಮಾರು ೪೭ಲಕ್ಷ ಎತ್ತಿಕೊಂಡು ದರೋಡೆಕೋರರು ಓಡಿಹೋಗಿದ್ದಾರೆ. ಇವರುಗಳನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ತಿಳಿಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com