

ನವದೆಹಲಿ: ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಜಾರಿಗೊಳಿಸ ಬೇಕೆಂದು ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್)ಗೆ ಮನವಿ ಸಲ್ಲಿಸಿದವರ ಹೆಸರು ಮತ್ತು ಇ-ಮೇಲ್ ಐಡಿಯನ್ನು ಸಂಸ್ಥೆ ಸೋಮವಾರ ಬಹಿರಂಗ ಮಾಡಿದೆ.
ಕೇಂದ್ರ ಸರ್ಕಾರಿ ಸಂಸ್ಥೆಯ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗೌಪ್ಯವಾಗಿಡಬೇಕಿದ್ದ ಈ ವಿಷಯವನ್ನು ಬಹಿರಂಗಗೊಳಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ನೆಟ್ ಬಳಕೆದಾರರನ್ನು ಪ್ರಾಧಿಕಾರವು ಯಾವ ರೀತಿಯಲ್ಲಿ ರಕ್ಷಿಸುತ್ತದೆ ಎಂಬುದು ಇದರಿಂದ ವ್ಯಕ್ತವಾಗಿದೆ ಎಂಬ ವ್ಯಂಗ್ಯ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗಿದೆ. ದೂರಸಂಪರ್ಕ ಸಂಸ್ಥೆಗಳು ವ್ಯಾಟ್ಸ್ ಆ್ಯಪ್, ಸ್ಕೈಪ್ ಬಳಕೆ ಮಾಡುವ ಬಗ್ಗೆ ನಿಯಮಗಳನ್ನು ರಚಿಸಿ ಟ್ರಾಯ್ ಗೆ ಸಲ್ಲಿಕೆ ಮಾಡಿವೆ.