ಮಹಾರಾಷ್ಟ್ರ ಗೋಮಾಂಸ ನಿಷೇಧ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರದಲ್ಲಿ ನಿಷೇಧಿಸಲಾಗಿರುವ ಗೋಮಾಂಸ ಮಾರಾಟ ಮತ್ತು ಭಕ್ಷಣೆಯ ಸರ್ಕಾರದ ನಿರ್ಧಾರವನ್ನು ಬುಧವಾರ ಬಾಂಬೆ ಹೈಕೋರ್ಟ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮುಂಬೈ: ಮಹಾರಾಷ್ಟ್ರದಲ್ಲಿ ನಿಷೇಧಿಸಲಾಗಿರುವ ಗೋಮಾಂಸ ಮಾರಾಟ ಮತ್ತು ಭಕ್ಷಣೆಯ ಸರ್ಕಾರದ ನಿರ್ಧಾರವನ್ನು ಬುಧವಾರ ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.

ನ್ಯಾಯಾಧೀಶ ವಿ ಎಂ ಕಾನಡೆ ಮತ್ತು ನ್ಯಾಯಾಧೀಶ ಎಂ ಎಸ್ ಸೋನಕ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಸರ್ಕಾರದ ಗೋಮಾಂಸ ನಿಷೇಧ ಆದೇಶದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿ ಈ ತೀರ್ಪು ನೀಡಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಮಟನ್ ಕಸಾಯಿಖಾನೆ ಯೂನಿಯನ್ ಸರ್ವಶ್ರಮಿಕ್ ಸಂಘದ ಕಾರ್ಯದರ್ಶಿ ವಿಜಯ್ ದಳವಿ ತಿಳಿಸಿದ್ದಾರೆ.

"ಈ ನಿಷೇಧ ಬರೀ ಗ್ರಾಹಕರನ್ನಷ್ಟೇ ಅಲ್ಲ, ರೈತರು, ಮಾರಾಟಗಾರರು, ಚರ್ಮದ ಉದ್ಯಮ ಹಾಗು ಇತರರನ್ನು ತೊಂದರೆಗೀಡು ಮಾಡುತ್ತದೆ ಎಂದು ನಾವು ವಿರೋಧಿಸಿದ್ದೆವು. ಇವರ ಸ್ಥಿತಿಯನ್ನು ಮುನ್ನಲೆಗೆ ತರಲು ಮುಂದಿನವಾರ ದಕ್ಷಿಣ ಮುಂಬೈನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ" ಎಂದು ದಳವಿ ತಿಳಿಸಿದ್ದಾರೆ.

ಮಾರ್ಚನಲ್ಲಿ ಗೋಮಾಂಸ ಮಾರಾಟ ಅಥವಾ ದಾಸ್ತಾನು ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುವ ಮಹಾರಾಷ್ಟ ಪ್ರಾಣಿ ರಕ್ಷಣಾ (ತಿದ್ದುಪಡಿ) ಕಾಯ್ದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದರು.

೧೯೭೬ರ ಮಹಾರಾಷ್ಟ ಪ್ರಾಣಿ ರಕ್ಷಣಾ ಕಾಯ್ದೆಯಲ್ಲಿಯೇ ಹಸುಗಳನ್ನು ಕೊಲ್ಲುವುದನ್ನು ನಿಷೇದಿಸಲಾಗಿತ್ತು. ಈಗ ಈ ಕಾಯ್ದೆಯ ತಿದ್ದುಪಡಿಯಲ್ಲಿ ಎತ್ತುಗಳನ್ನು ಕೊಲ್ಲದಂತೆ ಸೇರಿಸಲಾಗಿದೆ. ಈ ಹಿಂದೆ ಎತ್ತುಗಳ ಮಾಂಸಕ್ಕೆ ರಿಯಾಯಿತಿ ಇತ್ತು.

ಈಗ ಹೊಸ ಕಾಯ್ದೆಯಲ್ಲಿ ಎಮ್ಮೆಗಳ ಮಾಂಸಕ್ಕೆ ಮಾತ್ರ ಅವಕಾಶವಿದೆ. ಕ್ಯಾರಬೀಫ್ ಎಂದು ಕರೆಯುವ ಈ ಮಾಂಸ ಕೆಳಮಟ್ಟದ್ದು ಎಂದು ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com