
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇದ್ದ ರಿಜಿಸ್ಟ್ರಾರ್ ಹುದ್ದೆಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ನರೇಂದ್ರಕುಮಾರ್ ಬಸವರಾಜ್ ಗುಣಿಕಿ ಅವರನ್ನು ಹೈಕೋರ್ಟ್ ನೇಮಿಸಿದೆ.
ಹಾಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರಕುಮಾರ್ ಅವರನ್ನ ರಿಜಿಸ್ಟ್ರಾರ್ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಲಂಚ ಪ್ರಕರಣ ಹೊರಬೀಳುತ್ತಿದ್ದಂತೆ ರಿಜಿಸ್ಟ್ರಾರ್ ಹುದ್ದೆಗೆ ಎಚ್.ಆರ್. ದೇಶಪಾಂಡೆ ರಾಜಿನಾಮೆ ಸಲ್ಲಿಸಿದ್ದರು. ನಂತರ ಬಾಲಕೃಷ್ಣ ಅವರನ್ನು ಪ್ರಭಾರ ರಿಜಿಸ್ಟ್ರಾರ್ ಆಗಿ ನೇಮಿಸಲಾಗಿತ್ತು.
Advertisement