ರಿಯಾಜ್ ಸಸ್ಪೆಂಡ್

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಆರೋಪಿ, ಸಂಸ್ಥೆಯ ಜಂಟಿ ಆಯುಕ್ತ ಹುದ್ದೆಯಿಂದ ಸಯ್ಯದ್ ರಿಯಾಜ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ...
ಸೈಯದ್ ರಿಯಾಜ್
ಸೈಯದ್ ರಿಯಾಜ್

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಆರೋಪಿ, ಸಂಸ್ಥೆಯ ಜಂಟಿ ಆಯುಕ್ತ ಹುದ್ದೆಯಿಂದ ಸಯ್ಯದ್ ರಿಯಾಜ್ ಅವರನ್ನು ಅಮಾನತುಗೊಳಿಸಿ ಸರ್ಕಾರ  ಆದೇಶಿಸಿದೆ. ಶನಿವಾರ ಅಧಿಕೃತವಾಗಿ ಈ ಆದೇಶ ಹೊರಬಿದ್ದಿದೆ.

ಕಾನೂನು ಪ್ರಕಾರ ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ/ಸಿಬ್ಬಂದಿ ಬಂಧನಕ್ಕೊಳಗಾದಲ್ಲಿ ಆತನನ್ನು ಅಮಾನತುಗೊಳಿಸಲಾಗುತ್ತದೆ. ಹೀಗಾಗಿ ಆತ 48 ಗಂಟೆಗಳಿಗೂ ಅಧಿಕ ಸಮಯ  ಬಂಧನದಲ್ಲಿದ್ದ ಕಾರಣ ಸಹಜವಾಗಿ ಅಮಾತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿಯಮಾನುಸಾರ ಸುತ್ತೋಲೆ ಹೊರಡಿಸಿದೆ. ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಹೊರಬೀಳುತ್ತಿದ್ದಂತೆಯೇ ಹಜ್ ನೆಪದಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ರಿಯಾಜ್ ಯಾತ್ರೆ ಮುಗಿಸಿ ಹಿಂದಿರುಗಿದ್ದು, ಜುಲೈ 23ರಂದು ರಜೆಸ ಅವಧಿ ಮುಕ್ತಾಯವಾಗಿದ್ದರೂ ಅನಾರೋಗ್ಯದ  ನೆಪವೊಡ್ಡಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಲ್ಲದೇ ಚಿಕಿತ್ಸೆ ಪಡೆಯಲು ರಜೆ ಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಉಪರಿಜಿಸ್ಟ್ರಾರ್ ಗೋಪಾಲಕೃಷ್ಣ ರೈ ಅವರು ರಿಯಾಜ್‍ನ ಈ ರಜೆ ಅರ್ಜಿ ತಿರಸ್ಕರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದು ಅಮಾನತಿಗೆ ಶಿಫಾರಸು ಮಾಡಿದ್ದರು.

ಹಿಂದೆಯೂ ಅದೇ ಕಥೆ!
ಸೈಯದ್ ರಿಯಾಜ್ 2009ರಲ್ಲಿಯೂ ನಿಯಮಾವಳಿ ಉಲ್ಲಂಘಿಸಿ ಮುಂಬಡ್ತಿ ಪಡೆದುಕೊಂಡಿದ್ದೂ ಬೆಳಕಿಗೆ ಬಂದಿದೆ. ಲೋಕಾಯುಕ್ತದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ವೇತನ ಶ್ರೇಣಿ 14050- 26050 ಇತ್ತು. ಇದನ್ನು 2007ರೆ ಸೆಪ್ಟೆಂಬರ್ 25ರಂದು 18150-26925ಕ್ಕೆ ಉನ್ನತೀಕರಿಸಲಾಗಿತ್ತು. ಒಂದು ವರ್ಷದ ಬಳಿಕ 2007ರ ಅಧಿಸೂಚನೆಯನ್ನೇ ಮಾರ್ಪಡಿಸಿ 2007ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಾಡಲಾಗಿತ್ತು. `ಸೈಯದ್ ರಿಯಾಜ್ಗೆ ಪೂರ್ವಾನ್ವಯವಾಗಿ ಮುಂಬಡ್ತಿ ನೀಡಿರುವುದು ನಿಯಮಾನು ಸಾರವಾಗಿಲ್ಲ' ಎಂದು ಮಹಾಲೇಖಪಾಲರು (ಲೆಕ್ಕಪತ್ರ-  ಹಕ್ಕುಗಳು) ಆಕ್ಷೇಪ ವ್ಯಕ್ತಪಡಿಸಿದ್ದರು. ಅದನ್ನೂ ಸರ್ಕಾರ ಪರಿಗಣಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com