

ಲಂಡನ್: ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಶನಿವಾರ ೭.೧ ತೀವ್ರತೆಯ ಭೂಕಂಪ ಸಂಭವಿಸಿದ್ದು ಯಾವುದೇ ಹಾನಿಯಾಗಿಲ್ಲ ಅಥವಾ ಸುನಾಮಿ ಭೀತಿಯ ಸೂಚನೆಗಳೂ ಇಲ್ಲ ಎಂದು ತಿಳಿದುಬಂದಿದೆ.
ಹಿಂದೂ ಮಹಾಸಾಗರದ ದಕ್ಷಿಣ ಭಾಗದ ಸಮುದ್ರ ತಳ ಈ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದೆ.
ಆಸ್ಟ್ರೇಲಿಯಾದ ಪರ್ತ್ ನಗರದ ೩೧೦೦ ಕಿಮೀ ದೂರಕ್ಕೆ ಮತ್ತು ಯಾರೂ ನೆಲೆಸದ ಹರ್ಡ್ ದ್ವೀಪ ಮತ್ತು ಮೆಕ್ ಡೊನಾಲ್ಡ್ ದ್ವೀಪಗಗಳಿಂದ ೧೦೦೦ ಕಿಮೀ ದೂರದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಅಮೆರಿಕಾದ ಜಿಯೋಲಾಜಿಕಲ್ ಸಮೀಕ್ಷೆ ತಿಳಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.