ಆಸ್ಪತ್ರೆಯೂ ಅಸಹಾಯಕ: ವೆಂಟಿಲೇಟರ್ ಕೈಕೊಟ್ಟು 18 ರೋಗಿಗಳ ಸಾವು

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲಿ ಮಳೆ ಇನ್ನೂ ತಗ್ಗಿಲ್ಲ. ಒಂದೆಡೆ, ಪ್ರಕೃತಿಯ ಅವಾಂತರಕ್ಕೆ ಸಿಕ್ಕು...
ಚೆನ್ನೈನಲ್ಲಿ ಶುಕ್ರವಾರ ಬೆಳಿಗ್ಗೆ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಕ್ರೈಸ್ತ ಭಗಿನಿಯರು
ಚೆನ್ನೈನಲ್ಲಿ ಶುಕ್ರವಾರ ಬೆಳಿಗ್ಗೆ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಕ್ರೈಸ್ತ ಭಗಿನಿಯರು
Updated on: 
ನವದೆಹಲಿ: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲಿ ಮಳೆ ಇನ್ನೂ ತಗ್ಗಿಲ್ಲ. ಒಂದೆಡೆ, ಪ್ರಕೃತಿಯ ಅವಾಂತರಕ್ಕೆ ಸಿಕ್ಕು ಸತ್ತವರ ಸಂಖ್ಯೆ ದಿನೇ ದಿನೆ ಏರುತ್ತಿದ್ದರೆ, ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಸೂಕ್ತ ಸವಲತ್ತು ಸಿಗದೆ ರೋಗಿಗಳು ಸಾಲು ಸಾಲಾಗಿ ಸಾಯುತ್ತಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ 18 ರೋಗಿಗಳು ವೆಂಟಿಲೇಟರ್ ಸಿಗದೆ ಸಾವಿಗೀಡಾಗಿದ್ದಾರೆ.
ಚೆನ್ನೈನ ಮಿಯೋಟ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನಪಕ್ಕನಂನ ಅಡ್ಯಾರ್ ನದಿ ತಟದಲ್ಲೇ ಇರುವ ಈ ಆಸ್ಪತ್ರೆಯಲ್ಲಿ ನೀರಿನ ಪ್ರಮಾಣ ಮಳೆ ಸುರಿದಂತೆಲ್ಲ ಹೆಚ್ಚಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಜನರೇಟರ್ ಕೊಠಡಿ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಈ ನಡುವೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. 
ವಿದ್ಯುತ್ ಇಲ್ಲದೆ ವೆಂಟಿಲೇಟರ್‍ಗಳು ಸ್ತಬ್ಧಗೊಂಡಿವೆ. ಹೀಗಾಗಿ, ಅದರಲ್ಲಿದ್ದ 18 ರೋಗಿಗಳು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಘಟನೆಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಸಂಬಂಧಿಗಳು ಆರೋಪಿಸಿದರೆ, ಆಸ್ಪತ್ರೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮುಗುಮ್ಮಾಗಿದೆ. ಈ ನಡುವೆ ಸರ್ಕಾರ ಪ್ರಕರಣದ ತನಿಖೆಗೆ ಆದೇಶಿಸಿದೆ. 
ಔಷಧ, ಆಹಾರ ಪೊಟ್ಟಣಕ್ಕೆ ಪರದಾಟ: ಸಾವಿರಾರು ಮಂದಿ ಆಹಾರ, ನೀರು, ವಿದ್ಯುತ್ ಇಲ್ಲದೇ ತಮ್ಮ ತಮ್ಮ ಮನೆಗಳಲ್ಲೇ ಉಳಿದುಬಿಟ್ಟಿದ್ದಾರೆ. ಬಹುತೇಕ ಮಂದಿ ಮನೆಗಳ ಟೆರೇಸ್‍ಗಳಲ್ಲೇ ಠಿಕಾಣಿ ಹೂಡಿದ್ದು, ಐಎಎಫ್  ಹೆಲಿಕಾಪ್ಟರ್‍ಗಳ ಶಬ್ದ ಕೇಳಿದೊಡನೆ ಆಹಾರ ಹಾಗೂ ಔಷಧಗಳ ಪ್ಯಾಕೆಟ್ ಗಳಿಗಾಗಿ ಹಾತೊರೆಯುವ ದೃಶ್ಯ ಮನಕಲಕುವಂತಿದೆ. ವಿಮಾನ ನಿಲ್ದಾಣಕ್ಕೆ ಹೋದವರು ಏರ್‍ಪೋಟ್ರ್ ನಲ್ಲೇ, ಬಸ್ಸಿಗೆಂದು ಹೋದವರು ಬಸ್ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com