ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ

ಡಿ.7 ರಂದು ಆರಂಭವಾಗಲಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವಾಗಿಸಲು ರಾಜ್ಯ ಮುಜರಾಯಿ ಇಲಾಖೆ ನಿರ್ಧರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಡಿ.7 ರಂದು ಆರಂಭವಾಗಲಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವಾಗಿಸಲು ರಾಜ್ಯ ಮುಜರಾಯಿ ಇಲಾಖೆ ನಿರ್ಧರಿಸಿದೆ.

ಪ್ಲಾಸ್ಟಿಕ್ ಮುಕ್ತ ಪರಿಷೆಯನ್ನು ಯಶಸ್ವಿಗೊಳಿಸುವ ಹೊಣೆ ಹೊತ್ತುಕೊಂಡಿರುವ ಬಸವನಗುಡಿಯ ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯ, ಇದಕ್ಕೆ ಅಗತ್ಯವಾದ ಪರಿಸರ ಸ್ನೇಹಿ ಚೀಲಗಳನ್ನು ಪೂರೈಸಲು ಸಿದಟಛಿತೆ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಈ ಬಾರಿ ಪ್ರತಿ ಮಾರಾಟ ಮಳಿಗೆಗಳಿಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ಈ ಕೆಲಸವನ್ನೂ ಬಿಎಂಎಸ್ ಕಾಲೇಜು ನೇತೃತ್ವದಲ್ಲೇ ನಡೆಸಲಾಗುತ್ತಿದೆ. ಬಿಎಂಎಸ್ ಕಾಲೇಜಿನವರು ಕಳೆದ ವರ್ಷವೇ ಪರಿಷೆಯ ಮಾರಾಟಗಾರರಿಗೆ ಉಚಿತವಾಗಿ ಮರುಬಳಕೆಯ ಪರಿಸರ ಸ್ನೇಹಿ ಬ್ಯಾಗ್ (ನಾನ್ ಓವೆನ್ ಫ್ಯಾಬ್ರಿಕ್ ಕ್ಲಾತ್) ವಿತರಿಸಿದ್ದರು. ಆಗ ಸುಮಾರು 70 ಸಾವಿರ ಬ್ಯಾಗ್‍ಗಳನ್ನು ಉಚಿತವಾಗಿ ನೀಡಲಾಗಿತ್ತು. ಈ ವರ್ಷ 1.75 ಲಕ್ಷ ಪರಿಸರಸ್ನೇಹಿ ಬ್ಯಾಗ್‍ಗಳನ್ನು ವಿತರಿಸಲಾಗುತ್ತಿದೆ.

ಕಳೆದ ವರ್ಷ ದುರ್ಬಳಕೆಯಾಗಿದ್ದ ಬ್ಯಾಗ್ ಗಳನ್ನು ಮರುಬಳಕೆಯಾಗುವಂತೆ ಈ ಬಾರಿ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಹಲವು ಮಾರಾಟಗಾರರು ಬ್ಯಾಗ್ ಪಡೆದರೂ ಸಮರ್ಪಕವಾಗಿ ಗ್ರಾಹಕರಿಗೆ ನೀಡದೆ ದುರ್ಬಳಕೆ ಮಾಡಿಕೊಂಡಿದ್ದರು. ಆದರೆ ಈ ಬಾರಿ ಬ್ಯಾಗ್‍ಗಳು ದುರ್ಬಳಕೆಯಾಗದಂತೆ ಎಚ್ಚರ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. `ನಮ್ಮ ಕಾಲೇಜಿನ ಪಕ್ಕದಲ್ಲೇ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಪ್ಲಾಸ್ಟಿಕ್ ಕವರ್‍ಗಳು ಬಳಕೆಯಾಗುತ್ತಿದ್ದವು. ಹೀಗಾಗಿ ಪರಿಸರಕ್ಕೆ ಹಾನಿಯುಂಟುಮಾಡುವ ಕವರ್‍ಗಳನ್ನು ನಿಯಂತ್ರಿಸುವುದು ನಮ್ಮ ಕರ್ತವ್ಯವಲ್ಲವೇ? ಪರಿಸರ ಸ್ನೇಹಿ ಬ್ಯಾಗ್ ವಿತರಿಸುವ ಬಗ್ಗೆ ಚಿಂತನೆ ಮೂಡಿತು. ಕಾಲೇಜಿನ ಮೇಲಧಿಕಾರಿಗಳಿಗೆ ತಿಳಿಸಿದೆ. ಅವರು ಸಂಪೂರ್ಣವಾಗಿ ಒಪ್ಪಿದರು.
ಕಳೆದ ವರ್ಷದಿಂದ ಬ್ಯಾಗ್‍ಗಳನ್ನು ವಿತರಿಸಲು ಆರಂಬಿsಸಿದೆವು' ಎಂದು ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಎಂ.ಶಿವರಾಮ ರೆಡ್ಡಿ ತಿಳಿಸಿದರು.

ಇಲ್ಲಿ ತರಹೇವಾರಿ ಕಡಲೆಕಾಯಿ, ಕಡಲೆಪುರಿ ಮಾರಾಟದ್ದೇ ಕಾರುಬಾರು. ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್‍ಗಳಲ್ಲಿ ಪದಾರ್ಥಗಳನ್ನು ತುಂಬಿಕೊಡುವುದು ಸರ್ವೆ ಸಾಮಾನ್ಯವಾಗಿತ್ತು. ಈ ಪ್ಲಾಸ್ಟಿಕ್ ಪರಿಸರಕ್ಕೆ ತೀವ್ರ ಅನಾನುಕೂಲ ತಂದೊಡ್ಡುತ್ತಿತ್ತು. ಒಂದು ಅಂದಾಜಿನ ಪ್ರಕಾರ ಪರಿಷೆಯಲ್ಲಿ ಸರಿ ಸುಮಾರು 2 ಲಕ್ಷ ಪ್ಲಾಸ್ಟಿಕ್ ಕವರ್‍ಗಳು ಬಳಕೆಯಾಗುತ್ತವೆ. ಆದರೆ ಈ ವರ್ಷ ಆ ಕವರ್‍ಗಳಿಗೆ ಕೊಕ್ ನೀಡಿ ಬಟ್ಟೆ ಬ್ಯಾಗ್ ಗಳನ್ನು ನೀಡಲಾಗುತ್ತಿದೆ. ಡಿ.4ರಿಂದಲೇ ಬ್ಯಾಗ್‍ಗಳ ವಿತರಣೆ ಪ್ರಾರಂಭವಾಗಿದೆ. ಆನೇಕಲ್, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಿಂತಾಮಣಿ, ಶ್ರೀನಿವಾಸಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬರುವ ಕಡಲೆಕಾಯಿ ಬೆಳೆಗಾರರು ಲೋಡ್ ಗಟ್ಟಲೆ ಕಾಯಿ ತಂದು ಪರಿಷೆಯಲ್ಲಿ ಮಾರುತ್ತಾರೆ. ರೈತರ ಜೊತೆಗೆ ವ್ಯಾಪಾರಿಗಳೂ ಮಳಿಗೆ ತೆರೆದು ಮಾರುತ್ತಾರೆ. ಹತ್ತಾರು ಜಾತಿಯ ಹಸಿಕಾಯಿ, ಹುರಿದ ಕಾಯಿ, ಬೇಯಿಸಿದ ಕಡಲೆಕಾಯಿಗಳು ಮಾರಾಟವಾಗುತ್ತವೆ.

ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕೆಂಪೇಗೌಡರ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯನ್ನು ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿ ಆಚರಿಸುತ್ತಿರುವುದು ಪ್ರಗತಿಯ ಸಂಗತಿ. ಭಾನುವಾರದಿಂದ
ಮಂಗಳ-ವಾ-ರದವರೆಗೆ (ಮುಖ್ಯವಾಗಿ ಸೋಮವಾರ ಡಿ.7) ಮೂರು ದಿನಗಳ ಕಾಲ ನಡೆಯುವ ಪರಿಷೆಗೆ ಈಗಿನಿಂದಲೇ ತಯಾರಿ ನಡೆದಿದೆ. ಕಡಲೆಕಾಯಿ ಮಾರಾಟಗಾರರೂ ಕೂಡ ಇಲ್ಲಿಗೆ
ಆಗಮಿಸಿದ್ದಾರೆ.

ಮಾರಾಟಗಾರರ ಡೇಟಾ ಸಂಗ್ರಹ
ದೊಡ್ಡಗಣಪತಿ ದೇವಸ್ಥಾನದ ರಸ್ತೆಯಲ್ಲಿರುವ ಗೋಕುಲ ಸಂಸ್ಥೆ ವೃತ್ತದಿಂದ ವಿವೇಕಾನಂದ ವೃತ್ತದವರೆಗಿನ ಯಾವುದೇ ಮಾರಾಟಗಾರರು ಪ್ಲಾಸ್ಟಿಕ್ ವಿತರಿಸದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. ಮಾರಾಟಗಾರರಿಗೆ ಮಳಿಗೆಯ ಸಂಖ್ಯೆ, ಮಾರಾಟಗಾರರ ಹೆಸರು, ದೂರವಾಣಿ ಸಂಖ್ಯೆ ಒಳಗೊಂಡಂತೆ ಸಂಪೂರ್ಣ ಮಾಹಿತಿಯುಳ್ಳ ಗುರುತಿನ ಚೀಟಿ ನೀಡಲಾಗುತ್ತಿದೆ. ಅವರು ಎಷ್ಟು ಬ್ಯಾಗ್ ಬಳಸಿದರು ಎಂಬುದರ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ. ಪರಿಸರ ಸ್ನೇಹಿ ಬ್ಯಾಗ್‍ಗಳು ಒಂದು, ಮೂರು ಹಾಗೂ ಐದು ಲೀಟರ್ ಸಾಮಥ್ರ್ಯದಲ್ಲಿ ಮೂರು ಬಗೆಯಲ್ಲಿ ದೊರೆಯಲಿವೆ. ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆ: 9448429283.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com