ನೆರೆ ಸಂತ್ರಸ್ತರಿಗೆ ರು.10,000, 10 ಕೆಜಿ ಅಕ್ಕಿ, ಸೀರೆ, ಧೋತಿ ಘೋಷಿಸಿದ ಜಯಾ

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಕುಂಭದ್ರೋಣ ಮಳೆಯಿಂದಾಗಿ ಗುಡಿಸಲು ಅಥವಾ ಜೋಪಡಿ ಕಳೆದುಕೊಂಡವರಿಗೆ...
ಜಯಲಲಿತಾ
ಜಯಲಲಿತಾ
Updated on: 

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಕುಂಭದ್ರೋಣ ಮಳೆಯಿಂದಾಗಿ ಗುಡಿಸಲು ಅಥವಾ ಜೋಪಡಿ ಕಳೆದುಕೊಂಡವರಿಗೆ 10 ಸಾವಿರ ರುಪಾಯಿ ನಗದು, 10 ಕೆಜಿ ಅಕ್ಕಿ ಹಾಗೂ ಸೀರೆ, ಧೋತಿ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.

ಸ್ವಂತ ಮನೆ ಹೊಂದಿ, ಮಳೆಯಿಂದ ಸಂಕಷ್ಟದಲ್ಲಿರುವವರಿಗೂ 5 ಸಾವಿರ ನಗದು, 10 ಕೆಜಿ ಅಕ್ಕಿ ಹಾಗೂ ಸೀರೆ ಧೋತಿ ನೀಡುವುದಾಗಿ ಅಮ್ಮಾ ಹೇಳಿದ್ದಾರೆ. ಅಲ್ಲದೆ ಪ್ರವಾಹದಿಂದಾಗಿ ಸಂಪೂರ್ಣ ನೆಲೆ ಕಳೆದುಕೊಂಡವರಿಗೆ 10 ಸಾವಿರ ಮನೆಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.

'ಜಲಪ್ರಳಯಕ್ಕೆ ತುತ್ತಾಗಿದ್ದ ಚೆನ್ನೈ ಮಹಾನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಒಂದೇರಡು ದಿನದಲ್ಲಿ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ' ಎಂದು ತಮಿಳುನಾಡು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನುವಾರು ಕಳೆದುಕೊಂಡವರಿಗೆ 30 ಸಾವಿರ, ಮೇಕೆ, ಕೋಳಿ ಹಾಗೂ ಹಂದಿ ಕಳೆದುಕೊಂಡವರಿಗೆ ತಲಾ 3 ಸಾವಿರ ರುಪಾಯಿ ಪರಿಹಾರ ನೀಡುವುದಾಗಿ ತಮಿಳುನಾಡು ಸಿಎಂ ಹೇಳಿದ್ದಾರೆ.

ನೆರೆ ಸಂತ್ರಸ್ತರ ಕುರಿತು ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಮೀಕ್ಷಾ ಮುಗಿದ ನಂತರ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com