ಜಾತಿ ಇರುವವರೆಗೆ ಮೀಸಲು ಇರಲಿ

ತಾವು ಅಧಿಕಾರದಲ್ಲಿರುವವರೆಗೆ ಸಾಮಾಜಿಕ ನ್ಯಾಯ ಕಲ್ಪಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಿವರಗೆ ಜಾತಿ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕೆನ್ನುವ..
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ತಾವು ಅಧಿಕಾರದಲ್ಲಿರುವವರೆಗೆ ಸಾಮಾಜಿಕ ನ್ಯಾಯ ಕಲ್ಪಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಿವರಗೆ ಜಾತಿ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕೆನ್ನುವ ಅಂಬೇಡ್ಕರ್ ಆಶಯಕ್ಕೆ ಅನುಗುಣವಾಗಿ ದಲಿತ ಸಂಘಟನೆಗಳು ಹೋರಾಟ ಮುಂದುವರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಡಾ. ಡಿ.ಜಿ.ಸಾಗರ್ ಅಭಿನಂದನಾ ಸಮಿತಿಯು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಕಾರದೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಡಾ.ಡಿ.ಜಿ.ಸಾಗರ್ ಅಭಿನಂದನಾ ಗ್ರಂಥ' ಬಿಡುಗಡೆ ಮಾಡಿ ಮಾತನಾಡಿದರು. ತಳ ಸಮುದಾಯದ ಜನರಿಗೆ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮಾನತೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಈ  ವರ್ಗದ ಜನ ಕೂಡ ತಮ್ಮ ಏಳಿಗೆ ಗಾಗಿ ಯಾರು ಕೆಲಸ ಮಾಡುತ್ತಾರೆ, ಅವರ ಬದ್ದತೆ ಏನು? ಎಂಬುದನ್ನು ಗುರುತಿಸುವ ಕೆಲಸ ಮಾಡಬೇಕು. ಬಿಜೆಪಿಯವರು ಅಹಿಂದದಲ್ಲಿ `ಅ' ಬಿಟ್ಟು `ಹಿಂದ' ಮಾತ್ರ ಮಾಡಿಕೊಂಡಿದ್ದಾರೆ. ಅವರು ಕೇವಲ ಅಲ್ಪಸಂಖ್ಯಾ ತರ ವಿರೋಧಿಗಳಲ್ಲ, ಹಿಂದುಳಿದವರು ಮತ್ತು ದಲಿತರ ವಿರೋಧಿಗಳು.

ಪದೇ ಪದೇ ಮೀಸಲಾತಿ ಪರಿಶೀಲನೆ ಬಗ್ಗೆ ಪ್ರಸ್ತಾಪಿಸುತ್ತಾರೆ. ಅದು ಅವರ ರಹಸ್ಯ ಕಾರ್ಯಸೂಚಿ. ಬದಲವಾಣೆ ವಿರೋಧಿಗಳಿಂದ ಮಾತ್ರ ಇಂತಹ ಕೃತ್ಯಗಳು ನಡೆಯಲು ಸಾಧ್ಯ. ತಳ  ಸಮುದಾಯದವರು ಎಂದಿಗೂ ಇಂತಹವರನ್ನು ಬೆಂಬಲಿಸಕೂಡದು ಎಂದು ಮನವಿ ಮಾಡಿದರು.

ದಲಿತ ಸಂಘಟನೆಗಳು ಒಗ್ಗೂಡಲಿ: ಮೈಸೂರಿ ನ ನೆಲೆಮನೆ ಪ್ರಕಾಶನದ ದೇವೇಗೌಡರ ಮನೆಯಲ್ಲಿ ದೇವನೂರು ಮಹಾದೇವ, ದೇವಯ್ಯ ಹರವೆ, ಸಿದ್ದಲಿಂಗಯ್ಯ, ಬಿ. ಕೃಷ್ಣಪ್ಪ ಎಲ್ಲರೂ ಸೇರಿ ದಲಿತ  ಸಮಿತಿಯನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದರು. ಆ ಸಂದರ್ಭದಲ್ಲಿ ನಾನು ಅಲ್ಲಿದ್ದೆ. 1970ರಲ್ಲಿ ಆರಂಭವಾದ ಈ ಸಂಘಟನೆ ಶೋಷಿತರಪರವಾಗಿ ಹೋರಾಟ ನಡೆಸಿದೆ. ಈಗ ಹಲವು ಬಣಗಳಾಗಿ  ಛಿದ್ರವಾಗಿದ್ದು, ಮತ್ತೆ ಒಗ್ಗೂಡುವ ಅವಶ್ಯಕತೆ ಇದೆ. ಇಂಥ ಪ್ರಯತ್ನಕ್ಕೆ ನಮ್ಮ ಸಹಕಾರ ಎಂದಿಗೂ ಇದ್ದೇ ಇದೆ. ಡಿ.ಜಿ. ಸಾಗರ್ ಎಲ್‍ಎಲ್‍ಬಿ ಓದಿ ವೃತ್ತಿ ಕ್ಷೇತ್ರಕ್ಕೆ ಹೋಗದೆ ಹೋರಾಟಕ್ಕೆ ಇಳಿದರು  ಎಂದು ಸಿಎಂ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com