
ಬೆಂಗಳೂರು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೆಂಗಳೂರಿನಲ್ಲಿ ಡಿ.22 ಹಾಗೂ 23 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಸಂಚರಿಸುವ ಮಾರ್ಗಗಳಲ್ಲಿ ಎಲ್ಲ ಮಾದರಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಆದ್ದರಿಂದ ವಾಹನ ಸವಾರರು ಈ ಎರಡು ದಿನ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ಕೋರಲಾಗಿದೆ.
ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ ಜಂಕ್ಷನ್‍ನಿಂದ ಎ.ಎಸ್.ಸಿ. ವೃತ್ತ, ವಿಕ್ಟೋರಿಯಾ ರಸ್ತೆ, ಎ.ಎಸ್.ಸಿ. ವೃತ್ತದಿಂದ ಡಿಸೋಜಾ ವೃತ್ತ, ರಿಚ್‍ಮಂಡ್ ರಸ್ತೆ,
ಡಿಸೋಜಾ ವೃತ್ತದಿಂದ ಅಶೋಕನಗರ ಸಿಗ್ನಲ್ ಲೈಟ್, ಹೊಸೂರು ರಸ್ತೆ, ಅಶೋಕ- ನಗರ ಸಿಗ್ನಲ್ ಲೈಟ್‍ನಿಂದ ಆನೇಪಾಳ್ಯ ಜಂಕ್ಷನ್, ಬನ್ನೇರುಘಟ್ಟ ರಸ್ತೆ, ಆನೇಪಾಳ್ಯ ಜಂಕ್ಷನ್ ನಿಂದ ಡೈರಿ ವೃತ್ತ, ಡಾ.ಮರಿಗೌಡ ರಸ್ತೆ, ಡೈರಿ ವೃತ್ತದಿಂದ ಕೆ.ಹೆಚ್.ವೃತ್ತ, ಕೆ. ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ರಿಚ್ ಮಂಡ್ ವೃತ್ತ, ಆರ್‍ಅರ್‍ಎಂಆರ್ ರಸ್ತೆ, ರಿಚ್‍ಮಂಡ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಕಸ್ತೂರಿಬಾ ರಸ್ತೆ, ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತ, ಕ್ವೀನ್ಸ್ ರಸ್ತೆ, ಕ್ವೀನ್ಸ್ ವೃತ್ತದಿಂದ ಸಿಟಿಓ ವೃತ್ತ, ರಾಜಭವನ ರಸ್ತೆ, ಸಿಟಿಓ ವೃತ್ತದಿಂದ ರಾಜಭವನ ಜಂಕ್ಷನ್, ಅಲಿ ಆಸ್ಕರ್ ರಸ್ತೆ,
ರಾಜಭವನ ಜಂಕ್ಷನ್ ನಿಂದ ಇನ್ ಫೆಂಟ್ರಿ ರಸ್ತೆ ಜಂಕ್ಷನ್, ಇನ್ ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ ಜಂಕ್ಷನ್ ನಿಂದ ಟಿಎಂಸಿ ಜಂಕ್ಷನ್, ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತ, ಕಸ್ತೂರಿಬಾ ರಸ್ತೆ, ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್‍ಆರ್‍ಎಂಆರ್ ವೃತ್ತ, ರಿಚ್‍ಮಂಡ್ ರಸ್ತೆ, ಆರ್‍ಆರ್‍ಎಂಆರ್
ವೃತ್ತದಿಂದ ಆಪೇರಾ ಜಂಕ್ಷನ್‍ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಜತೆಗೆ ಬ್ರಿಗೇಡ್ ರಸ್ತೆ, ಅಪೇರಾ ವೃತ್ತದಿಂದ ಅಶೋಕನಗರ ಸಿಗ್ನಲ್ ಲೈಟ್, ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತದಿಂದ ಅನಿಲ್ ಕುಂಬ್ಳೆ ವೃತ್ತ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್. ವೃತ್ತ, ಕಬ್ಬನ್ ರಸ್ತೆ, ಬಿ.ಆರ್. ವೃತ್ತದಿಂದ ಮಣಿಪಾಲ್ ಸೆಂಟರ್, ಡಿಕನ್ಸನ್ ರಸ್ತೆ, ಮಣಿಪಾಲ್ ಸೆಂಟರ್ ನಿಂದ ವೆಬ್ಸ್ ಜಂಕ್ಷನ್, ಎಂ.ಜಿ.ರಸ್ತೆ, ವೆಬ್ಸ್ ಜಂಕ್ಷನ್‍ನಿಂದ ಟ್ರಿನಿಟಿ ವೃತ್ತ, ಟ್ರಿನಿಟಿ ಚರ್ಚ್ ರಸ್ತೆ, ಟ್ರಿನಿಟಿ ವೃತ್ತದಿಂದ ಎಎಸ್‍ಸಿ ವೃತ್ತದವರೆಗೂ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಆದ್ದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಸಾಧ್ಯವಾದಷ್ಟೂ ಪರ್ಯಾಯ ರಸ್ತೆಗಳನ್ನು ಬಳಸಬೇಕು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆ್ಯಂಬುಲೆನ್ಸ್‍ಗಳ ಸಹಾಯ ಬೇಕಿದ್ದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ- 100 ಮತ್ತು 103, ಸಂಚಾರ ಪೊಲೀಸ್ ಕೇಂದ್ರಸ್ಥಾನ- 08022942276, ಡಿಸಿಪಿ ಕಮಾ್ಯಂಡ್ ಸೆಂಟರ್- 9480801092 ಸಂಖ್ಯೆಗೆ ಸಂಪರ್ಕಿ ಸಬೆಕೆಂದು ಪ್ರಕಟಣೆ ತಿಳಿಸಿದೆ.
Advertisement