
ಬೆಂಗಳೂರು: ಕಳೆದ ಮಾರ್ಚ್ 26ರಂದು ನಾಗಾಲ್ಯಾಂಡ್‍ನ ಕೋಹಿಮಾ ಜಿಲ್ಲೆಯ ಇಂದಿರಾಗಾಂಧಿ ಸ್ಟೇಡಿಯಂ ಬಳಿ ಅಸ್ಸಾಂ ರೈಫಲ್ಸ್ ನ 6 ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದ ನ್ಯಾಷನಲ್ ಸೋಷಿಯಲಿಸ್ಟ್ ಕಮೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್ಎಸ್ಸಿಎನ್ಕೆ) ಉಗ್ರ ಸಂಘಟನೆಯ ಕಾರ್ಯಕರ್ತನನ್ನು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ), ಬೆಂಗಳೂರು ಪೊಲೀಸರು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ನಾಗಾಲ್ಯಾಂಡ್‍ನ ನಿಷೇಧಿತ ಎನ್‍ಸಿಎನ್ಕೆ ಉಗ್ರ ಸಂಘಟನೆಗೆ ಸೇರಿದ ಅತೋಷೇ ಚೋಪೆ (27) ಬಂಧಿತ ಉಗ್ರ. ಚೋಪೆ ನಗರದ ಎಂ.ಜಿ.ರಸ್ತೆಯ ಲಾಡ್ಜ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆತನನ್ನು ಬೆಂಗಳೂರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಈತನ `ಟ್ರಾನ್ಸಿಟ್ ರಿಮಾಂಡ್'ಗೆ ಧಿಮಾಪುರದ ವಿಶೇಷ ನ್ಯಾಯಾಲಯಕ್ಕೆ ಕೋರಲಾಗುವುದು ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.
Advertisement