ಜೆಡಿಎಸ್​ ಕಾರ್ಯಕರ್ತರ ಮಾರಾಮಾರಿ, ಶಾಸಕ ತಿಪ್ಪಾರೆಡ್ಡಿ ಮತ ಅಸಿಂಧು

ವಿಧಾನ ಪರಿಷತ್ ಚುನಾವಣೆಯಲ್ಲಿ ಅಹಿತಕ ಘಟನೆಯೊಂದು ನಡೆದಿದ್ದು, ತುಮಕೂರಿನಲ್ಲಿ ಬಿಜೆಪಿ - ಜೆಡಿಎಸ್​ ಕಾರ್ಯರ್ತರ ಮಧ್ಯೆ ಘರ್ಷಣೆ ಸಂಭವಿಸಿದೆ...
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ (ಸಂಗ್ರಹ ಚಿತ್ರ)
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಹಿತಕ ಘಟನೆಯೊಂದು ನಡೆದಿದ್ದು, ತುಮಕೂರಿನಲ್ಲಿ ಬಿಜೆಪಿ - ಜೆಡಿಎಸ್​ ಕಾರ್ಯರ್ತರ ಮಧ್ಯೆ ಘರ್ಷಣೆ ಸಂಭವಿಸಿದೆ.

ಮತದಾನದ ವೇಳೆ ತುಮಕೂರು ತಾಲೂಕಿನ ಊರುಕೆರೆ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಜೆಡಿಎಸ್​  ಸದಸ್ಯ ರಾಜಕುಮಾರ್​ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್​ ಕಾರ್ಯಕರ್ತರೊಂದಿಗೆ ಬಿಜೆಪಿ ಪಕ್ಷದ ಉಮೇಶ್​ ಮತ್ತು ಬೆಂಬಲಿಗರು ಜಗಳ ಮಾಡಿದ್ದು, ಈ  ವೇಳೆ ಎರಡೂ ಗುಂಪಿನ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಇನ್ನು, ಘಟನೆಯಲ್ಲಿ ಗಾಯಗೊಂಡಿರುವ ರಾಜಕುಮಾರ್​ನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ತುಮಕೂರು  ಎಸ್​ಪಿ ಕಚೇರಿ ಮುಂದೆ ಜೆಡಿಎಸ್ ಕಾರ್ಯರ್ತರು ಧರಣಿ ನಡೆಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

ಬಹಿರಂಗ ಮತದಾನ ಮಾಡಿದ ಶಾಸಕ ತಿಪ್ಪಾರೆಡ್ಡಿ ಮತ ಅಸಿಂಧು
ಮತ್ತೊಂದೆಡೆ ಬಹಿರಂಗವಾಗಿ ಮತದಾನ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ ಅವರ ಮತವನ್ನು ಅಸಿಂಧುಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ  ಚುನಾವಣಾಧಿಕಾರಿ ಶ್ರೀರಂಗಯ್ಯ ಆದೇಶಿಸಿದ್ದಾರೆ. ಬೆಳಗ್ಗೆ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಮತಗಟ್ಡೆಯಲ್ಲಿ ಮತದಾನ ಮಾಡಲು ಬಂದಿದ್ದ ಶಾಸಕ ತಿಪ್ಪಾರೆಡ್ಡಿ, ಮತಪತ್ರವನ್ನ ಪಡೆದು  ಎಲ್ಲರೆದುರೇ ಬರೆಯುವ ಮೂಲಕ ಮತ ರಹಸ್ಯವನ್ನು ಉಲ್ಲಂಘನೆ ಮಾಡಿದರು. ಈ ಹಿನ್ನಲೆಯಲ್ಲಿ 1961ರ ಸೆಕ್ಷನ್ 132ಎ ಅಡಿಯಲ್ಲಿ ಅವರ ಮತವನ್ನು ಅಸಿಂಧು ಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com