

ಮುಂಬೈ: ಬಾಲಿವುಡ್ ನಟ, ಗಾಯಕ ಫರ್ಹಾನ್ ಅಖ್ತರ್ ಅವರ ಮರ್ದ್ (MARD) ಅಭಿಯಾನಕ್ಕೆ ಹಾಲಿವುಡ್ ಸೇರಿದಂತೆ ವಿದೇಶಿ ಕಲಾವಿದರಿಂದಲೂ ಬೆಂಬಲ ಸಿಗುತ್ತಿದೆ.
ಮರ್ದ್ ಅಭಿಯಾನಕ್ಕೆ ಎಮ್ಮಾ ವಾಟ್ಸನ್ ಮತ್ತು ಮೈಕೆಲ್ ಬಾಲ್ಟನ್ ಅವರಿಂದ ಬೆಂಬಲ ಸಿಕ್ಕಿದ ನಂತರ ಇದೀಗ ಪಾಕಿಸ್ತಾನದ ಶಾಸ್ತ್ರೀಯ ಸಂಗೀತಗಾರ ಶಫ್ಕತ್ ಅಮನತ್ ಅಲಿ ಅವರಿಂದಲೂ ಬೆಂಬಲ ಸಿಕ್ಕಿದೆ.
ಸಮಾಜದಲ್ಲಿ ಲಿಂಗ ಸಮಾನತೆಗಾಗಿ ಹೋರಾಡುವ ಸಲುವಾಗಿ ಮರ್ದ್ ಅಭಿಯಾನವನ್ನು ಫರ್ಹಾನ್ ಆರಂಭಿಸಿದ್ದರು. ಫರ್ಹಾನ್‌ರ ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಈಗಾಗಲೇ ಸಿಲೆಬ್ರಿಟಿಗಳಾದ ಸಚಿನ್ ತೆಂಡೂಲ್ಕರ್, ಮಹೇಶ್ ಬಾಬು , ಶಾನ್, ಯುವರಾಜ್ ಸಿಂಗ್ ಮೊದಲಾದವರು ಮರ್ದ್‌ಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿ ಪ್ರಸಾರವಾಗುವ ಮರ್ದ್ ಅಭಿಯಾನದ ಹಾಡಿಗೂ ದನಿಗೂಡಿಸಿದ್ದಾರೆ.