
ಬೆಂಗಳೂರು: ಹೆಚ್ಚುತ್ತಿರುವ ರೈತರ ಸರಣಿ ಆತ್ಮಹತ್ಯೆಯಿಂದ ಆತಂಕಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಆತ್ಮಹತ್ಯೆಗೆ ಕಡಿವಾಣ ಹಾಕುವ ಸಲುವಾಗಿ ರೇಡಿಯೋದಲ್ಲಿ ಮನ್ ಕೀ ಬಾತ್ ಮೂಲಕ ಸಾಂತ್ವನ ಹೇಳಿದ್ದು, ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.
ಸಾಲದ ಶೂಲಕ್ಕೆ ಸಿಲುಕಿ ರಾಜ್ಯದಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನನಗೆ ಅತೀವ ನೋವನ್ನು ಉಂಟು ಮಾಡಿದೆ. ನಾನು ರೈತನ ಮಗನಾಗಿದ್ದು, ನನಗೂ ರೈತರ ಕಷ್ಟ, ಕಾರ್ಪಣ್ಯಗಳು ಏನೆಂದು ಗೊತ್ತು. ಎಂತಹ ಸಂದ್ಧಿದ ಸ್ಥಿತಿಯಲ್ಲೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನ್ ಕೀ ಬಾತ್ ಮೂಲಕ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಸಾಲಿನಲ್ಲಿ ಈಗಾಗಲೇ 70ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ವಿಚಾರ. ರಾಜ್ಯದ ರೈತರ ಆತ್ಮಹತ್ಯೆ ನನಗೆ ಅತೀವ ನೋವು ತರಿಸಿದೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಶರಣಾಗಬೇಡಿ. ನಿಮ್ಮ ತಂದೆ, ತಾಯಿ, ಮಡದಿ, ಮಕ್ಕಳನ್ನು ನೆನಪಿಸಿಕೊಳ್ಳಿ. ನಿಮ್ಮ ಕಷ್ಟಗಳನ್ನು ನಮ್ಮೊಡನೆ ಹಂಚಿಕೊಳ್ಳಿ ಎಂದಿದ್ದಾರೆ.
ಮೃತ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವಂತೆ ಸಚಿವರಿಗೆ, ಶಾಸಕರಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.
Advertisement