ಪಿಯು ಇಲಾಖೆ ಅಧ್ವಾನ: ಕೇಳಿದ್ದು ವಿಜ್ಞಾನ, ಬಂದಿದ್ದು ಅರ್ಥಶಾಸ್ತ್ರ!

ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಅಚಾತುರ್ಯದಿಂದ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಿಯು ಮಂಡಳಿ ಇದೀಗ ಯಾರೋ ಕೇಳಿದ ಉತ್ತರ..
ದಾಖಲೆ ಪರಿಶೀಲಿಸುತ್ತಿರುವ ಪೋಷಕರು
ದಾಖಲೆ ಪರಿಶೀಲಿಸುತ್ತಿರುವ ಪೋಷಕರು

ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಅಚಾತುರ್ಯದಿಂದ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಿಯು ಮಂಡಳಿ ಇದೀಗ ಯಾರೋ ಕೇಳಿದ ಉತ್ತರ ಪತ್ರಿಕೆಯ ನಕಲು ಪ್ರತಿಗೆ ಇನ್ಯಾರದ್ದೋ ಉತ್ತರ ಪತ್ರಿಕೆ ಕಳುಹಿಸುವುದರ ಮೂಲಕ ಇನ್ನೊಂದು ಅವಾಂತರ ಸೃಷ್ಟಿಸಿದೆ.

ಆಗಿದ್ದಿಷ್ಟು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ಎಸ್. ಸುಮಾ ಮಾರ್ಚ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಬಂದ ಅಂಕದಿಂದ ಅಸಮಾಧಾನಗೊಂಡಿದ್ದ ಅವರು ಮಂಡಳಿಗೆ ನಿಗದಿತ ಶುಲ್ಕವನ್ನು ಡಿಡಿ ಮೂಲಕ ಪಾವತಿಸಿ ಉತ್ತರ ಪತ್ರಿಗಳ ನಕಲು ನೀಡುವಂತೆ ಸ್ವವಿಳಾಸ ನೀಡಿ ಮನವಿ ಮಾಡಿದ್ದರು.

ಕೆಲವೇ ದಿನಗಳ ನಂತರ ಈಕೆಗೆ ಮಂಡಳಿಯಿಂದ ಒಂದು ಉತ್ತರ ಪ್ರತಿಯ ನಕಲು ಬಂದಿದೆ. ಆದರೆ ಅದು ಸುಮಾ (753017 ನೋಂದಣಿ ಸಂಖ್ಯೆ) ಅವರು ಬಯಸಿದ್ದ ವಿಜ್ಞಾನದ ವಿಷಯಕ್ಕೆ
ಸಂಬಂಧಿಸದೇ ಅರ್ಥಶಾಸ್ತ್ರ ವಿಭಾಗಕ್ಕೆ ಸೇರಿದ 752782 ನೋಂದಣಿ ಸಂಖ್ಯೆ ಇರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ನಕಲು ಕಳುಹಿಸಲಾಗಿದೆ. ಈ ಸಂಬಂಧ ಪಿಯು ಮಂಡಳಿಗೆ ದೂರವಾಣಿ ಮಾಡಿ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸುಮಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com