ಪಕ್ಷದ ಸದಸ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡ ಎಎಪಿ

ಪಕ್ಷದ ಸದಸ್ಯರಿಗೆ ಮನೆ, ಕಾರು ಹೀಗೆ ವಿವಿಧ ಅನುಕೂಲಗಳನ್ನು ಒದಗಿಸಿರುವುದಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಒಪ್ಪಿಕೊಂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಪಕ್ಷದ ಸದಸ್ಯರಿಗೆ ಮನೆ, ಕಾರು ಹೀಗೆ ವಿವಿಧ ಅನುಕೂಲಗಳನ್ನು ಒದಗಿಸಿರುವುದಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಒಪ್ಪಿಕೊಂಡಿದೆ.

ಬಿಜೆಪಿ ಶಾಸಕ ಒ ಪಿ ಶರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಈ ಸದಸ್ಯರನ್ನು ಸರ್ಕಾರದ ಸಿಬ್ಬಂದಿಗಳಾಗಿ ನೇಮಿಸಿಕೊಳ್ಳಲಾಗಿದೆ ಎಂದಿದೆ.

ಈ ಪ್ರತಿಕ್ರಿಯೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ಜಂಟಿ ಕಾರ್ಯದರ್ಶಿ ಅಸ್ವಥಿ ಮುರಳೀಧರನ್ ಅವರಿಗೆ ಮನೆ ನೀಡಲಾಗಿದೆ ಎಂದು ತಿಳಿಸಿದೆ.

ಅಲ್ಲದೆ ಈ ಸಿಬ್ಬಂದಿಗಳು ಹಿರಿಯ ಐ ಎ ಎಸ್ ಅಧಿಕಾರಿಗಳು ಪಡೆಯಲಿರುವಂತೆಯೆ ಅದೇ ಶ್ರೇಣಿಯಲ್ಲಿ ವೇತನ ಪಡೆಯಲಿದ್ದಾರೆ ಎಂದು ತಿಳಿಸಿದೆ.

೧೭ ಜನ ಸಹ ಸಿಬ್ಬಂದಿಗಳಲ್ಲದೆ, ೮ ಜನ ಗುತ್ತಿಗೆ ಸಿಬಂದಿಗಳನ್ನು ಕೂಡ ನೇಮಿಸಿದ್ದು ಅವರ ವೇತನ ೬೦ ಸಾವಿರದಿಂದ ೧.೧೫ ಲಕ್ಷದವರೆಗೆ ಇದೆ ಎಂದು ಸರ್ಕಾರ ತಿಳಿಸಿದೆ.

ಇಬ್ಬರು ಸಲಹೆಗಗಾರರು ಒಂದು ರುಪಾಯಿ ವೇತನಕ್ಕೆ ಕೂಡ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com