ಎಎಪಿ ಪ್ರತಿಭಟನೆಗೆ ಬೆದರಿದ ಬಿಡಿಎ, ಕಾಂಗ್ರೆಸ್ ಶಾಸಕನಿಗೆ ಹಂಚಿಕೆಯಾಗಿದ್ದ ಸೈಟು ರದ್ದು

ಆಮ್ ಆದ್ಮಿ ಪಕ್ಷದ ಪ್ರತಿಭಟನೆಗೆ ಬೆದರಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಜಯನಗರದ 5ನೇ ಬ್ಲಾಕ್‌ನಲ್ಲಿ ಅಕ್ರಮವಾಗಿ ಕಾಂಗ್ರೆಸ್...
ಮಾಲೀಕಯ್ಯಗೆ ಹಂಚಿಕೆಯಾಗಿದ್ದ ನಿವೇಶನ
ಮಾಲೀಕಯ್ಯಗೆ ಹಂಚಿಕೆಯಾಗಿದ್ದ ನಿವೇಶನ
Updated on: 

ಬೆಂಗಳೂರು: ಆಮ್ ಆದ್ಮಿ ಪಕ್ಷದ ಪ್ರತಿಭಟನೆಗೆ ಬೆದರಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಜಯನಗರದ 5ನೇ ಬ್ಲಾಕ್‌ನಲ್ಲಿ ಅಕ್ರಮವಾಗಿ ಕಾಂಗ್ರೆಸ್ ಶಾಸಕರೊಬ್ಬರಿಗೆ ಹಂಚಿಕೆಯಾಗಿದ್ದ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ನಿವೇಶನವನ್ನು ದಿಢೀರ್ ರದ್ದು ಮಾಡಿದೆ.

ಐದು ಕೋಟಿಗೂ ಹೆಚ್ಚು ಬೆಲೆ ಬಾಳುವ 60X80 ನಿವೇಶನವನ್ನು ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೆದಾರ್ ಅವರಿಗೆ ಕಾನೂನು ಬಾಹಿರವಾಗಿ ಕೇವಲ 50 ಸಾವಿರ ರುಪಾಯಿಗೆ ಬಿಡಿಎ ಮಂಜೂರು ಮಾಡಿತ್ತು. ಆದರೆ ಈ ಅಕ್ರಮದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಎಪಿ ಎಚ್ಚರಿಸಿದ್ದರಿಂದ ಶಾಸಕರಿಗೆ ಹಂಚಿಯಾಗಿದ್ದ ನಿವೇಶನವನ್ನು ಬಿಡಿಎ ರದ್ದುಗೊಳಿಸಿದೆ.

'ಶಾಸಕ ಮಾಲೀಕಯ್ಯ ಗುತ್ತೆದಾರ್ ಅವರು ಬೆಂಗಳೂರಿನಲ್ಲಿ ಮತ್ತೊಂದು ನಿವೇಶನ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರಿಗೆ ಜಯನಗರದಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ರದ್ದುಗೊಳಿಸಿದ್ದೇವೆ' ಎಂದು ಬಿಡಿಎ ಆಯುಕ್ತ ಶಾಮ್ ಭಟ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹಿನ್ನೆಲೆಯಲ್ಲಿ ಅಫ್ಜಲ್‌ಪುರ ಶಾಸಕನಿಗೆ ಈ ನಿವೇಶನ ನೀಡಲಾಗಿತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com