ಆಪ್ ಬಿಕ್ಕಟ್ಟು ತೀವ್ರ; ಕುಮಾರ್ ವಿಶ್ವಾಸ್ ಗೆ ಮಾಜಿ ಶಾಸಕ ರಾಜೇಶ್ ಗಾರ್ಗ್ ನೋಟಿಸ್

ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ದಿನೇದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ನಾಯಕತ್ವದ ಬಗ್ಗೆ ಎದ್ದಿರುವ ಹೊಸ ವಿರೋಧದಲ್ಲಿ ಆಪ್ ಪಕ್ಷದ ಮಾಜಿ
ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್
Updated on: 

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ದಿನೇದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ನಾಯಕತ್ವದ ಬಗ್ಗೆ ಎದ್ದಿರುವ ಹೊಸ ವಿರೋಧದಲ್ಲಿ ಆಪ್ ಪಕ್ಷದ ಮಾಜಿ ಶಾಸಕ ರಾಜೀವ್ ಗಾರ್ಗ್ ಅವರು ಕುಮಾರ್ ವಿಶ್ವಾಸ್ ಅವರಿಗೆ ನೋಟಿಸ್ ಕಳುಹಿಸಿ ಅವರನ್ನು ಅವಕಾಶವಾದಿ ಮತ್ತು ಬ್ಲ್ಯಾಕ್ ಮೇಲರ್ ಎಂದಿದ್ದಾರೆ.

ನನ್ನ ಚಾರಿತ್ರ್ಯಹರಣ ಮಾಡಿರುವ ವಿಶ್ವಾಸ್ ಈ ನೋಟಿಸ್ ತಲುಪಿದ ೧೫ ದಿನದೊಳಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅವರು ಕ್ಷಮೆ ಯಾಚಿಸದೆ ಹೋದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಟಿಕೆಟ್ ಗಾಗಿ ತಮ್ಮನ್ನು ಬ್ಲಾಕ್ ಮೇಲೆ ಮಾಡಿದ್ದರು ಎಂದು ಕುಮಾರ್ ವಿಶ್ವಾಸ್ ರಾಜೇಶ್ ಗಾರ್ಗ್ ವಿರುದ್ಧ ದೂರಿದ್ದರು.

ಇದಕ್ಕೂ ಮೊದಲು ಗಾರ್ಗ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದರು ಹಾಗೂ ತಮ್ಮ ಅವರ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿರುವುದಾಗಿ ಹೇಳಿದ್ದರು.

ಸದ್ಯದ ವರದಿಯಂತೆ ಈ ಆರೋಪಗಳಿಂದ ಬೇಸತ್ತು ಪಕ್ಷ ರಾಜೇಶ್ ಗಾರ್ಗ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com