
ಮಾಡೆಲಿಂಗ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಅಂತ ಬಂದ ಕೃಷ್ಣ ಸುಂದರಿ, ಪ್ರಿಯಾಂಕಾ ಚೋಪ್ರಾ ತಳವೂರಿದ್ದು ಮಾತ್ರ ಬಾಲಿವುಡ್‍ನ ಬಿಂದಾಸ್ ಜಗತ್ತಿನಲ್ಲಿ. `ವಿಶ್ವಸುಂದರಿ' ಕಿರೀಟ ತೊಟ್ಟು ಸುಂದರಿಯರಿಗೆ ರಾಣಿಯಾಗಿ ಮೆರೆದ ಈ `ಬದ್ಮಾಶ್ ಬಬ್ಲಿ' ಕಳೆದೊಂದು ದಶಕದಿಂದ ಬಾಲಿವುಡ್‍ನಲ್ಲಿ ಬಿಜಿಯೋ ಬಿಜಿ.
ಹನ್ನೆರಡು ವರ್ಷಗಳಲ್ಲಿ ಅನೇಕ ಸೂಪರ್‍ಹಿಟ್ ಚಿತ್ರಗಳನ್ನ ನೀಡಿರುವ ಈ ಸುಂದರಿ. ಬಿಟೌನ್‍ನಲ್ಲಿ ಪುರುಸೊತ್ತಿಲ್ಲದಷ್ಟು ಬಿಜಿಯಿದ್ದರೂ, ಹಳೆ ವೃತ್ತಿ `ಮಾಡೆಲಿಂಗ್' ಅನ್ನು ಮಾತ್ರ ಬಿಟ್ಟಿಲ್ಲ. `ವಿಶ್ವದ ಅತ್ಯಂತ ಸೆಕ್ಸಿ ಮಹಿಳೆ' ಅಂತ ಆಗಾಗ ಬಿರುದಾಂಕಿತಗೊಳ್ಳುವ ಪ್ರಿಯಾಂಕಾ `ಕಾಸ್ಮೊಪಾಲಿಟನ್' ಮ್ಯಾಗಜಿನ್‍ಗಾಗಿ ಇತ್ತೀಚೆಗೆ ಪಡ್ಡೆಗಳ ಕಣ್ಣುಕುಕ್ಕುವ ಫೋಟೊ ಶೂಟ್ ಮಾಡಿಸಿದ್ದಾಳೆ.
ಕಪ್ಪು-ಬಿಳುಪಿನ ತುಂಡುಡುಗೆ ತೊಟ್ಟು ಪಿಗ್ಗಿ ನೀಡಿರುವ ಹಾಟ್ ಪೋಸ್‍ಗಳು ಈ ತಿಂಗಳ ಆವೃತ್ತಿಯಲ್ಲಿ ಪ್ರಕಟಗೊಂಡಿದೆ. ಒಂದು ದಶಕದ ಹಿಂದೆ ಬಾಲಿವುಡ್‍ಗೆ ಕಾಲಿಟ್ಟಾಗ ಪ್ರಿಯಾಂಕಾ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಜಾಗೃತೆ ವಹಿಸುವ ಪಿಗ್ಗಿ ಅಂದಿನಿಂದ ಇಂದಿನವರೆಗೂ `ಝೀರೋ ಸೈಝ್'. ಇದೀಗ ಅಮೆರಿಕದ ಎಬಿಸಿ ವಾಹಿನಿಗಾಗಿ `ಕ್ವಾಂಟಿಕೋ' ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗವಹಿಸುತ್ತಿದ್ದಾರೆ
Advertisement