ಸೋನಿಯಾ ಗಾಂಧಿ ಮಾನಸಿಕ ಅಸ್ವಸ್ಥರ ಹಿಡಿತದಲ್ಲಿದ್ದಾರೆ: ಎಚ್ ಆರ್ ಭಾರದ್ವಾಜ್

ನವದೆಹಲಿ: ಸೋನಿಯಾ ಗಾಂಧಿ ಯಾವುದೇ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಿಲ್ಲ ಮತ್ತು ಅವರು ಅವರು ಮಾನಸಿಕ ಅಸ್ವಸ್ಥರ ಹಾಗೂ ಭ್ರಷ್ಟರ ಹಿಡಿತದಲ್ಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್ ಆರ್ ಭಾರದ್ವಾಜ್ ಗುರುವಾರ ನೇರ ವಾಗ್ದಾಳಿ ನಡೆಸಿದ್ದಾರೆ.
"ನಮ್ಮ ನಾಯಕರು ನ್ಯಾಯಾಲಯಗಳಿಂದ ಸಮನ್ಸ್ ಪಡೆಯುತ್ತಿರುವುದು ತೀವ್ರ ದುಃಖದ ವಿಷಯ... ಅದು ಪ್ರಧಾನ ಮಂತ್ರಿಯನ್ನು ಒಳಗೊಂಡಂತೆ ಮೇಲಿನ ಸ್ಥಾನಗಳಲ್ಲಿದ್ದವರಿಗೆ.
"ಏನಾಗುತ್ತಿದೆ, ಇದು ಏಕೆ ಆಗುತ್ತಿದೆ ಹಾಗು ಇದನ್ನು ಮಾಡಿದವರು ಯಾರು ಎಂದು ಸೋನಿಯಾ ಗಾಂಧಿ ಅವರಿಗೆ ಅರ್ಥವಾಗುತ್ತದೆಯೆ?ಎಲ್ಲವೂ ಗೊತ್ತಿದೆ. ಅದೇ ಶೈಲಿ. ಯಾವುದೇ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಿಲ್ಲ ಆದರೆ ಏನೂ ಮಾಡುವುದಿಲ್ಲ" ಎಂದು ಅವರು ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಆದರೆ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿರುವ ಅವರು "ಕಾಂಗ್ರೆಸ್ ಉಪಾಧ್ಯಕ್ಷರನ್ನು ಅನಾವಶ್ಯಕವಾಗಿ ಕಷ್ಟಕ್ಕೆ ದೂಕಲಾಗುತ್ತಿದೆ" ಎಂದಿದ್ದಾರೆ.
"ಅವರನ್ನು ದೂಷಿಸುವುದೇಕೆ? ಅವರು ಯಾವುದೇ ಸ್ಥಾನದಲ್ಲಿಲ್ಲ. ಅವರು ಉಪಾಧ್ಯಕ್ಷ ಮಾತ್ರ. ಲೋಕಸಭಾ ಚುನಾವಣೆಗಳಲ್ಲಿ ಅವರನ್ನು ಸುಮ್ಮನೆ ಕಷ್ಟಕ್ಕೆ ಗುರಿಪಡಿಸಲಾಯಿತು" ಎಂದಿದ್ದಾರೆ.
ಯುಪಿಎ-೧ ರಲ್ಲಿ ಕಾನೂನು ಸಚಿವರಾಗಿದ್ದ ಭಾರದ್ವಾಜ್ ಅವರನ್ನು ಯುಪಿಎ-೨ರಲ್ಲಿ ಕೈಬಿಟ್ಟು, ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


