

ನವದೆಹಲಿ: ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಸಂಸದರು ಸರ್ಕಾರದ 'ಎಲ್ಲರನ್ನು ಒಳಗೊಂಡ ಅಭಿವೃದ್ಧಿ'ಗಾಗಿ ಮಾಡಿರುವ ಯೋಜನೆಗಳಿಗೆ ಸರ್ಕಾರನ್ನು ಶ್ಲಾಘಿಸಿ ಜನರಿಗೆ ನೀಡಿದ್ದ ಎಲ್ಲ ವಚನವನ್ನು ಪೂರೈಸುವ ಭರವಸೆ ನೀಡಿದ್ದಾರೆ.
ಒಂದು ವಾರದ ವಾರ್ಷಿಕ ಸಂಭ್ರಮಾಚರಣೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿರುವ ಬಿಜೆಪಿ ಸಂಸದೀಯ ಪಕ್ಷ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡ ಜನ ಮತ್ತು ದಮನಿತರಿಗಾಗಿ ಸರ್ಕಾರ ತೆಗೆದುಕೊಂಡ ಸಾಮಾಜಿಕ ಭದ್ರತೆ ಮತ್ತು ಪಾರದರ್ಶಕ ಆಡಳತಿ ನೀತಿಯ ಯೋಜನೆಗಳಿಗೆ ಏಕಮತದ ಬೆಂಬಲ ಘೋಷಿಸಿದ್ದಾರೆ.
"ಎನ್ ಡಿ ಎ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಈ ಸಮಯದಲ್ಲಿ ಒಂದು ವಾರದ ಸಂಭ್ರಮಾಚರಣೆಗಳಿರುತ್ತವೆ, ಪ್ರತಿ ಸಂಸದ ತಮ್ಮ ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಸಾಧನೆಗಳನ್ನು ಮನವರಿಕೆ ಮಾಡಿಕೊಡುತ್ತಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ" ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಕೇಂದ್ರ ಸಚಿವರ, ಸಂಸದರು ಹಾಗು ಕಾರ್ಯಕರ್ತರು ದೇಶದಲ್ಲಿ ತಮ್ಮ ಕ್ಷೇತ್ರಗಳ ವಿವಿಧ ಬಾಗಗಳಿಗೆ ತೆರಳಿ ದಮನಿತ ಸಮುದಾಯಕ್ಕೆ ಹಾಗೂ ರೈತರ ಕಲ್ಯಾಣಕ್ಕೆ ಸರ್ಕಾರ ತೆಗೆದುಕೊಂಡಿರುವ ಅಭಿವೃದ್ಧಿ ಕ್ರಮಗಳ ಬಗ್ಗೆ ಜನರಿಗೆ ಮೇ ೨೬ ರಿಂದ ಪ್ರಾರಂಭವಾಗಲಿರುವ ಒಂದು ವಾರದ "ಜನ ಕಲ್ಯಾಣ ಪರ್ವ" ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಪಕ್ಷ ಇದಕ್ಕೂ ಮೊದಲು ತಿಳಿಸಿತ್ತು.
ಮೋದಿಯವರ ನಾಯಕತ್ವವನ್ನು ಪಕ್ಷ ಏಕಪಕ್ಷೀಯವಾಗಿ ಅನುಮೋದಿಸಿ ಬೆಂಬಲಿಸಿದೆ. ಇನ್ನು ಮುಂದೆಯೂ ಜನರ ಭರವಸೆಗಳನ್ನು ಸರ್ಕಾರ ಪೂರೈಸಲಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.