ಸಿಇಟಿ ಫಲಿತಾಂಶ ಪ್ರಕಟ: ಮೆಡಿಕಲ್ ನಲ್ಲಿ ಪ್ರಿಯಾ ನರ್ವಾಲ್ ಮೊದಲ ಸ್ಥಾನ

2015-16ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೇ 12, 13ರಂದು ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದೆ...
ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ
ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: 2015-16ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೇ 12, 13ರಂದು ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದೆ.

ಸೋಮವಾರ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ  ಪ್ರಕಟಿಸಿದರು. ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್ ವಿಭಾಗದ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಸಿಇಟಿಯಲ್ಲಿ ಈ ಬಾರಿ ವಿದ್ಯಾರ್ಥಿಗಳಿಗೆ 8 ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಅತಿ ಹೆಚ್ಚು ಅಂಕಗಳಿಸಿರುವ ಮೊದಲ ಐದು ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಲಾಗುವುದು ಎಂದು ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ಮೆಡಿಕಲ್ ನಲ್ಲಿ ಪ್ರಿಯಾ ನರ್ವಾಲ್ ಎಂಬ ವಿದ್ಯಾರ್ಥಿನಿ ಮೊದಲ ಸ್ಥಾನ ಗಳಿಸಿದ್ದು, ಎಲ್.ಮಾನಸ 2ನೇ ಸ್ಥಾನ ಮತ್ತು ಟಿ ಪಲ್ಲವಿಗೆ 3ನೇ ಸ್ಥಾನ ಲಭಿಸಿದೆ. ಜೂನ್ 13ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಈ ಹಿಂದೆ ಸಿಇಟಿ ಫ‌ಲಿತಾಂಶವನ್ನು ಮೇ 26ರಂದು ಪ್ರಕಟಿಸುವುದಾಗಿ ಹೇಳಲಾಗಿತ್ತು. ಆದರೆ, ದ್ವಿತೀಯ ಪಿಯುಸಿ ಫ‌ಲಿತಾಂಶ ಗೊಂದಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವ‌ರ ಒತ್ತಾಯದ ಮೇಲೆ ಸಿಇಟಿ ಫ‌ಲಿತಾಂಶವನ್ನು ಜೂ. 1ಕ್ಕೆ ಮುಂದೂಡಲಾಗಿತ್ತು. ಒಟ್ಟು 1.57 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು:
http://kea.kar.nic.in
http://cet.kar.nic.in
http://karresults.nic.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com