ವಿಧಾನಸೌಧದ 3ನೇ ಮಹಡಿಯಲ್ಲಿ ಕಚೇರಿಗಾಗಿ ಮೂವರು ನಾಯಕರ ಕಿತ್ತಾಟ

ಕುರ್ಚಿಗಾಗಿ ಕಿತ್ತಾಡುವ ನಮ್ಮ ನೇತರಾರರು ಇದೀಗ ಕಚೇರಿಗಾಗಿಯೂ ಕಿತ್ತಾಡಲು ಶುರು ಮಾಡಿದ್ದಾರೆ.
ವಿಧಾನಸೌಧ
ವಿಧಾನಸೌಧ
Updated on: 

ಬೆಂಗಳೂರು: ಕುರ್ಚಿಗಾಗಿ ಕಿತ್ತಾಡುವ ನಮ್ಮ ನೇತರಾರರು ಇದೀಗ ಕಚೇರಿಗಾಗಿಯೂ ಕಿತ್ತಾಡಲು ಶುರು ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧಾನಸೌಧದ 3ನೇ ಮಹಡಿಯಲ್ಲಿ ಕಚೇರಿಗಾಗಿ ಕಿತ್ತಾಟ ಆರಂಭವಾಗಿದೆ.

ಪರಮೇಶ್ವರ ಅವರಿಗೆ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 205 ಹಾಗೂ 206 ಅನ್ನು ನೀಡಲಾಗಿದೆ. ಆದರೆ ಇದಕ್ಕೆ ಒಪ್ಪದ ಪರಮೇಶ್ವರ ಅವರು, ಮೂರನೇ ಮಹಡಿಯಲ್ಲಿರುವ ಎರಡು ಸಮಿತಿಗಳ ಅಧ್ಯಕ್ಷರ ಕಚೇರಿಯಾದ 338ಕ್ಕೆ ಬೇಡಿಕೆ ಇಟ್ಟಿದ್ದಾರೆ.

3ನೇ ಮಹಡಿಯಲ್ಲೇ ಮುಖ್ಯಮಂತ್ರಿಗಳ ಕಚೇರಿ ಇದ್ದು, ತಾವು ಸಹ ಅಲ್ಲೇ ಇರಬೇಕು ಎಂಬುದು ಸಚಿವರ ಅಭಿಲಾಷೆ. ಪರಮೇಶ್ವರ ಅವರು 3ನೇ ಮಹಡಿಯಿಂದಲೇ ಕೆಲಸ ಮಾಡಬೇಕು ಎಂಬುದು ಅವರ ಬೆಂಬಲಗರ ಒತ್ತಾಯ. ಪರಮೇಶ್ವರ ಅವರು ಈಗ ನಂಬರ್ 2. ಹೀಗಾಗಿ ಅವರಿಗೆ 3ನೇ ಮಹಡಿಯಲ್ಲೇ ಕಚೇರಿ ನೀಡಬೇಕು ಎಂಬುದು ಬೆಂಬಲಿಗರ ವಾದ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಮೇಶ್ವರ ಅವರಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ಪರಮೇಶ್ವರ ಅವರಿಗೆ ಕಚೇರಿ ಬಿಟ್ಟುಕೊಡಲು ಸಿದ್ಧವಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಅವರು, 3ನೇ ಮಹಡಿಯಲ್ಲಿರುವ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರ ಕಚೇರಿಯನ್ನು ಕೇಳುತ್ತಿದ್ದಾರೆ.

ಅಧಿಕೃತವಾಗಿ ಈ ಮೂವರು ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹನುಮಂತಯ್ಯ ಅವರ ಭೇಡಿಕೆಯನ್ನು ಪರಿಗಣಿಸಿ, ಉಗ್ರಪ್ಪ ಅವರ ಕಚೇರಿಯನ್ನೇ ನೀಡಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಉಗ್ರಪ್ಪ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕ್ರಮವನ್ನು ವಿರೋಧಿ ಸಿಎಂಗೆ ಪತ್ರ ಬರೆದಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ತಮ್ಮ ಕಚೇರಿಯನ್ನು ಬಹುಮಹಡಿ ಕಟ್ಟಕ್ಕೆ ಸ್ಥಳಾಂತರಿಸುವಂತೆ ಉಗ್ರಪ್ಪನವರಿಗೆ ಸೂಚಿಸಲಾಗಿದೆ.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿರುವ ಉಗ್ರಪ್ಪ, ಕಚೇರಿ ಸ್ಥಳಾಂತರ ಮಾಡುವಂತೆ ನನಗೆ ಸೂಚಿಸಲಾಗಿದೆ. ಸಚಿವರ ಕಚೇರಿಗೆ ಅವಕಾಶ ನೀಡುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ಮತ್ತೊಬ್ಬರಿಗಾಗಿ ಸಮಿತಿ ಸ್ಥಳಾಂತರಿಸುವುದು ಎಷ್ಟು ಸರಿ. ಹೀಗಾಗಿ ನಾನು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com