ಸಣ್ಣ ತಪ್ಪಿನಿಂದ ಸಿಕ್ಕಿಬಿದ್ದ ಛೋಟಾ ರಾಜನ್

ಎರಡು ದಶಕಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದ ಛೋಟಾ ರಾಜನ್ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ...
ಭೂಗತ ಪಾತಕಿ ಛೋಟಾ ರಾಜನ್ (ಸಂಗ್ರಹ ಚಿತ್ರ)
ಭೂಗತ ಪಾತಕಿ ಛೋಟಾ ರಾಜನ್ (ಸಂಗ್ರಹ ಚಿತ್ರ)

ನವದೆಹಲಿ: ಎರಡು ದಶಕಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದ ಛೋಟಾ ರಾಜನ್ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಆಸ್ಟ್ರೇಲಿಯಾ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ ಮಾಡಿದ ಸಣ್ಣ ತಪ್ಪಿನಿಂದಾಗಿ ಛೋಟಾ ರಾಜನ್ ಸಿಕ್ಕಿ ಬಿದ್ದಿದ್ದಾನೆ. ಭದ್ರತಾ ಸಿಬ್ಬಂದಿ ಹೆಸರು ಹೇಳುವಂತೆ ಸೂಚಿಸಿದಾಗ ಛೋಟಾ ರಾಜನ್ ತನ್ನ ಹೆಸರು ರಾಜೇಂದ್ರ ನಿಕಲ್ಜೆ ಎಂದಿದ್ದ. ಆದರೆ, ರಾಜನ್ ಪಾಸ್‌ಪೋರ್ಟ್‌ನಲ್ಲಿ ಮೋಹನ್ ಕುಮಾರ್ ಎನ್ನುವ ಹೆಸರಿತ್ತು. ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ  ರಾಜನ್  ಪೂರ್ವಾಪರ ಜಾಲಾಡಿದ್ದಾರೆ. ತಕ್ಷಣ ಇಂಡೋನೇಷ್ಯಾ ಪೊಲೀಸರು ಇನ್ನಷ್ಟು ಮಾಹಿತಿ ನೀಡಿದ್ದಾರೆ.

ಇಂಡೋನೇಷ್ಯಾ ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸಿದಾಗ ರಾಜನ್  ಬೇರಾರೂ ಅಲ್ಲ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿಗಳಲ್ಲಿ ಒಬ್ಬನಾದ ಛೋಟಾ ರಾಜನ್ ಎನ್ನುವುದು ಖಚಿತವಾಯಿತು. ಜತೆಗೆ, ಆತನ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಯಾಗಿರುವುದು ಬೆಳಕಿಗೆ ಬಂದಿತು.ಆ ಬಳಿಕವೇ ಬಾಲಿ ಪೊಲೀಸರು ರಾಜನ್‌ನನ್ನು ವಶಕ್ಕೆ  ತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com