ಇಬ್ಬರು ಉಪ ತಹಶೀಲ್ದಾರ್ ಸೇರಿ 5 ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ

ಇಬ್ಬರು ಉಪ ತಹಶೀಲ್ದಾರ್ ಸೇರಿದಂತೆ ಒಟ್ಟು ಐದು ಮಂದಿ ಅಧಿಕಾರಿಗಳ ಮೇಲೆ ಭಾನುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ...
ಲೋಕಾಯುಕ್ತ ದಾಳಿ (ಸಂಗ್ರಹ ಚಿತ್ರ)
ಲೋಕಾಯುಕ್ತ ದಾಳಿ (ಸಂಗ್ರಹ ಚಿತ್ರ)

ಬೆಂಗಳೂರು: ಇಬ್ಬರು ಉಪ ತಹಶೀಲ್ದಾರ್ ಸೇರಿದಂತೆ ಒಟ್ಟು ಐದು ಮಂದಿ ಅಧಿಕಾರಿಗಳ ಮೇಲೆ ಭಾನುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.

ವಿಜಯ ಬ್ಯಾಂಕ್ ಹೌಸಿಂಗ್ ಸೊಸೈಟಿಗೆ ಸಂಬಂಧಿಸಿದ ದೂರನ್ನು ಆಧರಿಸಿ ಭಾನುವಾರ ಬೆಳಗ್ಗೆ ಲೋಕಾಯುಕ್ತ ಎಸ್ ಪಿ ಸೋನಿಯಾ ನಾರಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡ ಐವರು  ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ 2001ರಲ್ಲೇ ಮೃತ ಪಟ್ಟಿದ್ದ ಅಭಯಪ್ಪ ಅವರ ಬನ್ನೇರುಘಟ್ಟ ರಸ್ತೆಯಲ್ಲಿರುವ 1ಎಕರೆ 30ಗುಂಟೆ ಜಮೀನು  ಪರಿವರ್ತನೆಗೆ ಅರ್ಜಿ ಹಾಕಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಿಡಿಎ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸುಧಾ, ಉಪ ತಹಸೀಲ್ದಾರ್ ಗಳಾದ ವಿಮಲಾ ಮತ್ತು ರವೀಂದ್ರ, ನಿವೃತ್ತ ಶಿರಸ್ತೇದಾರ್ ಮೈಲಾರಪ್ಪ ಸೇರಿದಂತೆ ಐವರ ಮನೆ ಮೇಲೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com