ಭೂ ಒತ್ತುವರಿ ತೆರವು

ಹುಳಿಮಾವು ಕೆರೆಯಲ್ಲಿ `ಹಾಲ್ ಮಾರ್ಕ್ ಅಪಾರ್ಟ್‍ಮೆಂಟ್' ಒತ್ತುವರಿ ಮಾಡಿಕೊಂಡಿದ್ದ ಭೂಮಿ, ಬೆಂಗಳೂರಿನ ಹಲವಡೆ ಜಿಲ್ಲಾಡಳಿತ ಶನಿವಾರ ಅಂದಾಜು ರು.1,161 ಕೋಟಿ ಮೌಲ್ಯದ 40.35 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹುಳಿಮಾವು ಕೆರೆಯಲ್ಲಿ `ಹಾಲ್ ಮಾರ್ಕ್ ಅಪಾರ್ಟ್‍ಮೆಂಟ್' ಒತ್ತುವರಿ ಮಾಡಿಕೊಂಡಿದ್ದ ಭೂಮಿ, ಬೆಂಗಳೂರಿನ ಹಲವಡೆ ಜಿಲ್ಲಾಡಳಿತ ಶನಿವಾರ ಅಂದಾಜು ರು.1,161 ಕೋಟಿ ಮೌಲ್ಯದ 40.35 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ.

ಹುಳಿಮಾವಿನಲ್ಲಿ 124 ಎಕರೆ ಕೆರೆಯಿದ್ದು, 18 ಗುಂಟೆ ಜಮೀನನ್ನು ಹಾಲ್‍ಮಾರ್ಕ್ ಅಪಾರ್ಟ್‍ಮೆಂಟ್ ಒತ್ತುವರಿ ಮಾಡಿಕೊಂಡಿತ್ತು. ಇನ್ನು, 8 ಎಕರೆ ಭೂಮಿಯನ್ನು ಬಿಡಿಎ 1992ರಲ್ಲಿ ನಿವೇಶನ ಮಾಡಿ ಹಂಚಿತ್ತು. ಈ 18 ಗುಂಟೆಯಲ್ಲಿ 29 ಅಂತಸ್ತಿನ ಕಟ್ಟಡವಿದೆ. ಉಳಿದ ಸುಮಾರು 115 ಎಕರೆ ಪ್ರದೇಶವನ್ನು ಕೆಲವರು ಸ್ವಂತಕ್ಕೆ ಬಳಸಿಕೊಂಡಿದ್ದರು. ಲಾರಿಗಳ ನಿಲುಗಡೆ, ಖಾಸಗಿ ವ್ಯಕ್ತಿ ಕಾರ್ ಪಾರ್ಕಿಂಗ್ ಸೇರಿ ಹಲವು ಕಾರಣ ಗಳಿಗೆ ಜಾಗವನ್ನು ಬಳಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ಯಲ್ಲಿ ರು.1,130 ಕೋಟಿ ಬೆಲೆ ಬಾಳುವ ಜಾಗವನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಎಲ್ಲೆಲ್ಲಿ ಕಾರ್ಯಾಚರಣೆ?: ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಬೆತ್ತನಗೆರೆಯ ಕೆರೆಯ 2.23 ಎಕರೆ ಒತ್ತುವರಿಯನ್ನು ತಹಸೀಲ್ದಾರ್ ಶಿವಪ್ಪ ಎಚ್. ಲಮಾಣಿ ತಂಡ ತೆರವುಗೊಳಿಸಿತು. ಈ ಜಾಗ ಅಂದಾಜು ರು.5 ಕೋಟಿ ಮೌಲ್ಯ ಬಾಳುವಂಥದ್ದು. ಉತ್ತರ (ಅಪರ) ತಾಲೂಕು, ಹೆಸರಘಟ್ಟ ಹೋಬಳಿ, ಮಾರಸಂದ್ರದ ಸರ್ಕಾರಿ ಕೆರೆಯ 3 ಎಕರೆಯ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದಲ್ಲಿ ತೆರವುಗೊಳಿಸ-ಲಾಯಿತು. ಈ ಜಾಗ ಅಂದಾಜು ರು.15 ಕೋಟಿ ಮೌಲ್ಯ ಎನ್ನಲಾಗಿದೆ. ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಹರಳುಕುಂಟೆಯ (ಹೆಚ್.ಎಸ್.ಆರ್ ಲೇಔಟ್) ಕೆರೆ ಸ.ನಂ.69 ರಲ್ಲಿ 12.31 ಎಕರೆ, ಎಳ್ಳುಕುಂಟೆಯ ಸ.ನಂ.31ರಲ್ಲಿ 15.11 ಎಕರೆ ಭೂಮಿಯ ಮಾಲಿಕತ್ವವನ್ನು ಪರಸಾಲಪ್ಪ ರೆಡ್ಡಿ , ಎ.ಎಂ. ಗೋವಿಂದರೆಡ್ಡಿ ಮತ್ತು ಇತರೆ 45 ಮಂದಿ ತಮ್ಮದೆಂದು ವಾದಿಸಿದ್ದರು. ಇದು ನ್ಯಾಯಾಲ- ಯದ ಮೆಟ್ಟಿಲೇರಿದ್ದು, ಹಕ್ಕು ಪ್ರತಿಪಾದನೆ ಅರ್ಜಿ ವಜಾಗೊಂಡಿತ್ತು. ಈ ಜಾಗವನ್ನೂ ವಶಕ್ಕೆ ಪಡೆಯಲಾಗಿದೆ.

ಇದರಲ್ಲಿ 3 ಎಕರೆ ಬಿಡಿಎ ನಿವೇಶನ ಮಾಡಿ ಹಂಚಿದ್ದು ಉಳಿಕೆ ಜಾಗ ತೆರವುಗೊಳಿಸಲಾಗಿದೆ. ತಾವರೆಕೆರೆ ಹೋಬಳಿ, ಕುರುಬರಹಳ್ಳಿಯಲ್ಲಿ ಸರ್ಕಾರಿ ಕೆರೆ ಸ.ನಂ.66 ರಲ್ಲಿ 1 ಎಕರೆ, ಅಜ್ಜನಹಳ್ಳಿಯ ಸ.ನಂ.25 ರಲ್ಲಿ 5 ಗುಂಟೆ ಜಾಗ ವಶಕ್ಕೆ ಪಡೆಯಲಾಯಿತು. ಕೆಂಗೇರಿ ಹೋಬಳಿ ಗೋಣಿಪುರದ ಸ.ನಂ.45 ರಲ್ಲಿ 38 ಗುಂಟೆ ಜಾಗ ವಶಕ್ಕೆ ಪಡೆಯಲಾಯಿತು. ತಹಸೀಲ್ದಾರ್ ಡಾ. ಮಮತ ನೇತೃತ್ವದಲ್ಲಿ ರು.6 ಕೋಟಿ ಮೌಲ್ಯದ ಜಾಗ ವಶಪಡಿಸಿಕೊಳ್ಳಲಾಗಿದೆ. ಪೂರ್ವ ತಾಲೂಕು, ಕಮ್ಮಸಂದ್ರದ ಸ.ನಂ.74 ರಲ್ಲಿ 1.22 ಎಕರೆ, ರಂಡಹಳ್ಳಿಯ ಸ.ನಂ.95 ರಲ್ಲಿ 1.27 ಎಕರೆ, ವರ್ತೂರು ಗ್ರಾಮದ ಸ.ನಂ.319 ರಲ್ಲಿ 20 ಗುಂಟೆ, ಕಾಚಮಾರನಹಳ್ಳಿಯ ಸ.ನಂ.15 ರಲ್ಲಿ ಎಕರೆ ಜಾಗ ಕೃಷಿಗಾಗಿ ಒತ್ತುವರಿ ಮಾಡಲಾಗಿತ್ತು. ತಹಸೀಲ್ದಾರ್ ಡಾ.ಹರೀಶ್ ನಾಯï್ಕ ನೇತೃತ್ವದಲ್ಲಿ ಅಂದಾಜು ರು.5 ಕೋಟಿ ಮೌಲ್ಯದ ಜಾಗ ವಶಕ್ಕೆ ಪಡೆಯಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com