
ಬೆಂಗಳೂರು: ರಾಜ್ಯದ ಮನೆಗಳಿಗೆ ಸರ್ಕಾರ ವಿತರಿಸುತ್ತಿರುವ ಎಲ್ಇಡಿ ಭಾಗ್ಯ ಯೋಜನೆಗೆ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಹಾಗೂ ನಟಿ ರಮ್ಯಾ ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ.
ವಿದ್ಯುತ್ ಉಳಿತಾಯ ಉದ್ದೇಶದಿಂದ ಕಡಿಮೆ ಕರೆಂಟ್ ನಲ್ಲೆ ಬೆಳಗುವ ಎಲ್ಇಡಿ ಬಲ್ಬ್ ಗಳನ್ನು ರಾಜ್ಯದ ಮನೆಗಳಿಗೆ ವಿತರಿಸುವ ಯೋಜನೆ ಹಮ್ಮಿಕೊಂಡಿತ್ತು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಯಭಾರಿಗಳ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ಕುಮಾರ್, ನಟಿ ರಮ್ಯಾ ಉಪಸ್ಥಿತರಿದ್ದರು.
ಎಲ್ಇಡಿ ಭಾಗ್ಯ ಯೋಜನೆಗೆ ರಾಯಭಾರಿ ಆಗಿದ್ದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್`ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಇಡಿ ವಿತರಣೆ ಯೋಜನೆಗೆ ಸೋಮವಾರ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
Advertisement