ನವದೆಹಲಿ: ``ಭವಿಷ್ಯದಲ್ಲಿ ನಾವು ಸೈಬರ್ ಯುದ್ಧಗಳನ್ನು ಎದುರಿಸಬೇಕಾಗಬಹುದು.'' ಇಂತಹುದೊಂದು ಆತಂಕ ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್.``ಇಂದಿನ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನವು ಮಹತ್ವದ ಪಾತ್ರ ವಹಿಸುತ್ತಿದೆ. ಹಾಗಂತ, ಸಾಂಪ್ರದಾಯಿಕ ಸೇನೆಯನ್ನು ಬದಲಿಸಬೇಕಿಲ್ಲ. ಸೇನಾ ಅರಿವಿಗೆ ಅಗತ್ಯವಾದ ತಂತ್ರಜ್ಞಾನ ಗಳು ಹಾಗೂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ. ಈ ವಿಚಾರದಲ್ಲಿ ನಾವು ಐಎಎಸ್‍ನಂತಹ ಉಗ್ರ ಸಂಘಟನೆಯ ಉದಾಹರಣೆಯನ್ನೇ ತೆಗೆದುಕೊಳ್ಳಬಹುದು. ಈ ಸಂಘಟನೆ ಇಂಟರ್ನೆಟ್ ಅನ್ನು ಬಳಸಿಕೊಂಡೇ ಉಗ್ರರ ನೇಮಕ ಮಾಡಿಕೊಳ್ಳುತ್ತಿದೆ, ಬೆಂಬಲ ಪಡೆಯುತ್ತಿದೆ. ಇವರು ತಮ್ಮ ಉದ್ದೇಶ ಈಡೇರಿಕೆಗಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುತ್ತಿದ್ದಾರೆ'' ಎಂದಿದ್ದಾರೆ ಪರ್ರಿಕರ್.